ಲಾಕ್ ಡೌನ್ ಸಡಿಸುತ್ತಿರುವ ಹಿನ್ನಲೆ; ಕೆಎಸ್ ಆರ್ ಟಿಸಿ ಸಿಬ್ಬಂದಿ, ಪ್ರಯಾಣಿಕರಿಗೆ ಹೊಸ ರೂಲ್ಸ್

ಸೋಮವಾರ, 18 ಮೇ 2020 (10:46 IST)

ಬೆಂಗಳೂರು : ಲಾಕ್ ಡೌನ್ ಸಡಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿ, ಪ್ರಯಾಣಿಕರಿಗೆ ಹೊಸ ರೂಲ್ಸ್ ಜಾರಿಗೆ ತಂದಿದೆ.

 

ಅದರಂತೆ ಬಸ್ ನಲ್ಲಿ 20ರಿಂದ 50 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ರಾಜಹಂಸ-20 ಪ್ರಯಾಣಿಕರಿಗಷ್ಟೇ ಅವಕಾಶ. ಸಿಬ್ಬಂದಿ, ಪ್ರಯಾಣಿಕರಿಗೆ ಮಾಸ್ಕ್ ,ಸಾಮಾಜಿಕ ಅಂತರ ಕಡ್ಡಾಯ . ಡಬಲ್ ಸೀಟ್ ನಲ್ಲಿ ಒಬ್ಬರು ಹಾಗೂ ತ್ರಿಬಲ್ ಸೀಟ್ ನಲ್ಲಿ ಇಬ್ಬರು ಕೂರಲು ಅವಕಾಶ ನೀಡಿದೆ.
 

ಬಸ್ ನಲ್ಲಿ ನಿಂತು ಪ್ರಯಾಣಿಸಲು ಅವಕಾಶ ಇಲ್ಲ.  ಮುಖ್ಯ ನಿಲ್ದಾಣಗಳಲ್ಲಷ್ಟೇ ಬಸ್ ನಿಲುಗಡೆ ಮಾಡಬೇಕು. ಮಾರ್ಗ ಮಧ್ಯೆ ಪ್ರಯಾಣಿಕರು ಬಸ್ ಹತ್ತುವಂತಿಲ್ಲ. ಹಾಗೇ ಪ್ರಯಾಣಿಕರ ವಿಳಾಸ ಪಡೆಯುವುದು ಕಡ್ಡಾಯ. 65 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಮಕ್ಕಳಿಗೆ ಬಸ್ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಯಾಣಿಕ ಅನಾರೋಗ್ಯದಿಂದ ಬಳಲುತ್ತಿದ್ರೆ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತರಬೇಕು ಎಂಬುದಾಗಿ ತಿಳಿಸಲಾಗಿದೆ. 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ