ಲಾಕ್ ಡೌನ್ ಎಫೆಕ್ಟ್ : ಮನೆ ಬಾಗಿಲಿಗೆ ಬಂತು ಎಟಿಎಂ

ಸೋಮವಾರ, 20 ಏಪ್ರಿಲ್ 2020 (19:38 IST)
ಲಾಕ್ ಡೌನ್ ನಲ್ಲಿ ಬ್ಯಾಂಕ್ ಗಳಿಗೆ ಹೋಗೋಕೆ ಕಷ್ಟ ಅನ್ನೋರೆ ಜಾಸ್ತಿ. ಅಂಥವರು ಇನ್ಮುಂದೆ ಚಿಂತೆ ಮಾಡಬೇಕಿಲ್ಲ. ಯಾಕಂದ್ರೆ ಎಟಿಎಂ ಮನೆ ಬಾಗಿಲಿಗೆ ಬರ್ತಿದೆ.

ಪ್ರಸಕ್ತ ಲಾಕ್ ಡೌನ್‍ಸಂದರ್ಭದಲ್ಲಿ ಕಲಬುರಗಿಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಮನೆ-ಮನೆಗೆ ತೆರಳಿ ತನ್ನ ಗ್ರಾಹಕರಿಗೆ ಹಣತಲುಪಿಸುವ ಕಾರ್ಯ ಮಾಡುತ್ತಿದೆ. ಮೊಬೈಲ್ (ಸಂಚಾರಿ) ಎಟಿಎಂ ಮೂಲಕ ಪ್ರತಿನಿತ್ಯ ಕಲಬುರಗಿ ನಗರದ ವಿವಿಧ ಬಡಾವಣೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುತ್ತಿದ್ದು, ಈಮೂಲಕ ಗ್ರಾಹಕರು ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಬ್ಯಾಂಕಿನ ಕಲಬುರಗಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ.ಜಿ.ಸಿದ್ದೇಶಪ್ಪ ತಿಳಿಸಿದ್ದಾರೆ.

ಯಾವುದೇ ಬ್ಯಾಂಕಿನ ಗ್ರಾಹಕರೂ ಪ್ರತಿದಿನ 25 ಸಾವಿರದವರೆಗೆ ಹಣವನ್ನು ಎಟಿಎಂ ಕಾರ್ಡ್‍ಬಳಸಿ ಡ್ರಾ ಮಾಡಿಕೊಳ್ಳಬಹುದು. ಎಟಿಎಂನಿಂದ ಹಣ ಪಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ