10 ದಿನಗಳಿಂದ ನಡೆಯುತ್ತಿದ್ದ ಲಾರಿ ಮಾಲೀಕರ ಮುಷ್ಕರ ಅಂತ್ಯ

ಶನಿವಾರ, 8 ಏಪ್ರಿಲ್ 2017 (17:22 IST)
10 ದಿನಗಳಿಂದ ನಡೆಯುತ್ತಿದ್ದ ಲಾರಿ ಮಾಲೀಕರ ಮುಷ್ಕರ ಅಂತ್ಯಗೊಂಡಿದೆ. ಲಾರಿ ಮಾಲೀಕರ ಸಂಘ ಮತ್ತು ವಿಮೆ ನಿಯಂತ್ರಣ ಪ್ರಾಧಿಕಾರದ ನಡುವೆ ನಡೆದ ಸಭೆ ಫಲಪ್ರದವಾಗಿದೆ. ವಿಮೆ ಪ್ರಿಮಿಯಂ ಶೇ.23ರಷ್ಟು ಇಳಿಸಲು ಪ್ರಾಧಿಕಾರ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಹೀಗಾಗಿ, 10 ದಿನಗಳಿಂದ ಬೀದಿಗಿಳಿಯದ ಲಾರಿಗಳು ಇಂದಿನಿಂದ ರಸ್ತೆಗಿಳಿಯಲಿವೆ.
 

ವಿಮೆ ಪ್ರೀಮಿಯಂ ಕಡಿತ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 10 ದಿನಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಲಾರಿ ಮಾಲೀಕರು ಮುಷ್ಕರ ನಡೆಸಿದ್ದರು. 2 ಲಕ್ಷಕ್ಕೂ ಅಧಿಕ ಲಾರಿಗಳು ನಿಂತಲ್ಲೇ ನಿಂತಿದ್ದವು. ಎರಡು ಬಾರಿ ವಿಮಾ ಪ್ರಾಧಿಕಾರದ ಜೊತೆ ಲಾರಿ ಮಾಲೀಕರು ನಡೆಸಿದ ಸಂಧಾನ ಮುರಿದುಬಿದ್ದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ