ಲವ್ ಫೆಲ್ಯೂರ್ : ಕಾಲೇಜಿನಲ್ಲೇ ವಿಷ ಕುಡಿದ ಯುವಕ

ಗುರುವಾರ, 3 ಅಕ್ಟೋಬರ್ 2019 (13:10 IST)

ಪ್ರೀತಿ ಮಾಯೆ ಹುಷಾರು… ಕಣ್ಣೀರು ಮಾರೋ ಬಜಾರು ಅಂತೆಲ್ಲ ಪ್ರೀತಿ, ಪ್ರೇಮದ ಬಗ್ಗೆ ಹಾಡುಗಳು ಬರುತ್ತಲೇ ಇವೆ. ಆದರೆ ಸೂಕ್ಷ್ಮವಾಗಿ ಭದ್ರ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಯುವಕನೊಬ್ಬ ಒನ್ ಸೈಡ್ ಪ್ರೀತಿ ಗುಂಗಲ್ಲಿ ತನ್ನ ಪ್ರಾಣವನ್ನೇ ಬಿಟ್ಟಿದ್ದಾನೆ.

ಆ ಯುವತಿ ಹಾಗೂ ಯುವಕ ಒಂದೇ ಕಾಲೇಜಿನಲ್ಲಿ ಓದುತ್ತಿದ್ರು. ಹುಡುಗಿ ಮೇಲೆ ಕಣ್ಣು ಹಾಕಿದ್ದ ಯುವಕ ತನ್ನಷ್ಟಕ್ಕೆ ಲವ್ ಮಾಡಲು ಶುರುಮಾಡಿದ್ದಾನೆ. ಹುಡುಗಿಯ ನಂಬರ್ ಪಡೆದು ವಾಟ್ಸಪ್ ಚಾಟ್ ಆರಂಭಿಸಿದ್ದಾನೆ.

ಆದರೆ ಸಹಜವಾಗಿ ಪ್ರತಿಕ್ರಿಯೆ ನೀಡುತ್ತಿದ್ದ ಹುಡುಗಿ ಪ್ರೀತಿ, ಪ್ರೇಮ ವಿಷಯಕ್ಕೆ ಬ್ರೇಕ್ ಹಾಕಿದ್ದಾಳೆ. ಇತ್ತ ಪ್ರೀತಿ ವಿಷಯವನ್ನು ಹುಡುಗನೂ ಆಕೆ ಹತ್ತಿರ ಹೇಳಿಕೊಂಡಿಲ್ಲ.

ಪ್ರೀತಿ ವಿಷಯದಲ್ಲಿ ವೈಫಲ್ಯಗೊಂಡಿದ್ದ ವಿದ್ಯಾರ್ಥಿ ಜಗದೀಶ್ ಯಲ್ಲಾಪುರ (18) ಕಾಲೇಜಿನ ಗ್ರೌಂಡ್ ನಲ್ಲೇ ವಿಷ ಕುಡಿದು ಸಾವನ್ನಪ್ಪಿದ್ದಾನೆ.

ಹಾವೇರಿಯ ಜಿ.ಎಚ್.ಕಾಲೇಜು ವಿದ್ಯಾರ್ಥಿಯಾಗಿದ್ದ ಜಗದೀಶನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ