ಸಿಎಂ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಿದ್ದು, ಒಂದು ಸ್ಥಾನವನ್ನು ಜಾರ್ಜ್ ಅವರಿಗೆ ಖಾಲಿ ಬಿಟ್ಟಿದ್ದಾರೆ. ಸಿಐಡಿ ತನಿಖೆಯಲ್ಲಿ ಜಾರ್ಜ್ ದೋಷಮುಕ್ತರಾದ ಬಳಿಕ ಜಾರ್ಜ್ ಅವರಿಗೆ ಈ ಸ್ಥಾನವನ್ನು ನೀಡಲು ಸಿಎಂ ನಿರ್ಧರಿಸಿದ್ದಾರೆ. ಕಳೆದ ಬಾರಿ ಕೃಷ್ಣಪ್ಪ ಅವರಿಗೆ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿಹೋಗಿತ್ತು. ಪಶುಸಂಗೋಪನೆ ರಾಜ್ಯ ದರ್ಜೆಯಲ್ಲಿರುವ ಎ.ಮಂಜುವಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ.