ದೆಹಲಿಯಲ್ಲಿ ಮಹದಾಯಿ ಹೋರಾಟ ನಾಲ್ಕನೆ ದಿನಕ್ಕೆ

ಬುಧವಾರ, 2 ಮೇ 2018 (13:04 IST)
ಮಹದಾಯಿ ಮತ್ತು  ಕಳಸಾ ಬಂಡೂರಿ ಕುಡಿಯುವ ಯೋಜನೆ ಜಾರಿಗೆ ಒತ್ತಾಯಿಸಿ ದೆಹಲಿಯಲ್ಲಿ ಕರ್ನಾಟಕ ರೈತ ಸೇನಾ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಈಗಾಗಲೆ ನಾಲ್ಕನೇ ದಿನಕ್ಕೆ  ಕಾಲಿಟ್ಟಿದೆ.
 ಏ. 25 ರಂದು ರೈತ ಸೇನಾ ಅಧ್ಯಕ್ಷ ಹಾಗೂ ರೈತ ಮುಖಂಡ ವೀರೇಶ ಸೊಬರದಮಠ ನೇತೃತ್ವದಲ್ಲಿ ನವಲಗುಂದ ಹಾಗೂ ನರಗುಂದ ಭಾಗದ ನೂರಾರು ಹೋರಾಟಗಾರರು ದೆಹಲಿಗೆ ತೆರಳಿದ್ದು, ಕಳೆದ ನಾಲ್ಕು ದಿನಗಳಿಂದ ಮಹದಾಯಿ ಯೋಜನೆ ಜಾರಿಗೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಪ್ರಧಾನಿಯವರಿಗೆ ಯೋಜನೆ ಜಾರಿ ಮಾಡುವಂತೆ ಆದೇಶ ನೀಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು  ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 
 
ರೈತರೆಲ್ಲರೂ ಸೇರಿ ವಿಶ್ವ ಹಿಂದೂ ಪರಿಷತ್ತು  ಭವನದಿಂದ ಸಂಸತ ಭವನದವರೆಗೆ ಪಾದಯಾತ್ರೆ ಮೂಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದರು. 
 
ರಾಷ್ಟ್ರಪತಿಗಳನ್ನು ಭೇಟಿಗೆ ಕಾಲಾವಕಾಶ ಕೇಳಿದ್ದು, ರಾಷ್ಟ್ರಪತಿಗಳನ್ನು ಭೇಟಿಯಾಗಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಧಾನಿಗಳಿಗೆ ಸೂಚನೆ ನೀಡುವಂತೆ ಒತ್ತಾಯಿಸಲಿದ್ದಾರೆ.‌ ಒಂದು ವೇಳೆ ಯೋಜನೆ ಜಾರಿಗೆ  ಮಾಡದಿದ್ರೆ, ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಲಿದ್ದಾರೆ.‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ