ಮಹಾರಾಷ್ಟ್ರ, ತೆಲಂಗಾಣ ಗಡಿಯಲ್ಲಿ ಕಟ್ಟೆಚ್ಚರ!
ವ್ಯಾಕ್ಸಿನೇಷನ್ ಪಡೆದವರಿಗೆ ಎಂಟ್ರಿ ಪಡೆಯದವರಿಗೆ ಬಂದ ದಾರಿ ಸುಂಕವಿಲ್ಲವೆಂದು ವಾಪಸ್ ಕಳುಹಿಸಲಾಗುತ್ತಿದೆ. ಬೀದರ್ ಜಿಲ್ಲಾಡಳಿತದಿಂದ ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಓಮೈಕ್ರಾನ ಸೋಂಕು ವೇಗವಾಗಿ ಹರಡುತ್ತಿದೆ. ಅದರಲ್ಲೂ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನಲೆ ಈಗಾಗಲೇ ಸಭೆ ನಡೆಸಿರುವ ಪ್ರಧಾನಿಗಳು ರಾಜ್ಯಗಳಲ್ಲಿ ಕಟ್ಟೆಚ್ಚರವಹಿಸುವಂತೆ ಸೂಚಿಸಿದ್ದು, ಲಸಿಕೆಗೆ ವೇಗ ನೀಡುವಂತೆ ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದಿಂದ ಬರುವಂತ ಪ್ರತಿಯೊಂದು ವಾಹನಗಳು ತಪಾಸಣೆ ಒಳಪಡಿಸಲಾಗುತ್ತದೆ. ಬೀದರ್ ಜಿಲ್ಲಾಡಳಿತ ದಿಂದ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಆದೇಶ ಮಾಡಲಾಗಿದೆ.