ವಿಮಾನದಲ್ಲಿ ಮಹಿಳೆಯ ಖಾಸಗಿ ಅಂಗಾಂಗ ಸ್ಪರ್ಶಿಸಿದ ವ್ಯಕ್ಯಿಯ ಬಂಧನ
50 ವರ್ಷದ ರಂಗನಾಥ್ ಬಂಧಿತ ವ್ಯಕ್ತಿ. ಅಮೆರಿಕಾದಲ್ಲಿ ಇಂಜಿನಿಯರ್ ವೃತ್ತಿಯಲ್ಲಿರುವ ಈತ ಅಮೆರಿಕಾದಿಂದ ಬೆಂಗಳೂರಿಗೆ ಬರುವಾಗ ವಿಮಾನದಲ್ಲಿ ಅಸಭ್ಯ ವರ್ತನೆ ತೋರಿದ್ದಾನೆ. ಪಕ್ಕದಲ್ಲಿ ಕೂತಿದ್ದ ಮಹಿಳೆ ನಿದ್ರೆ ಮಾಡುತ್ತಿದ್ದಾಗ ಈತ ಅಶ್ಲೀಲ ವರ್ತನೆ ತೋರಿದ್ದಾನೆ. ಇದರಿಂದ ಎಚ್ಚರಗೊಂಡ ಆಕೆ ಆರೋಪಿಯನ್ನು ಪ್ರಶ್ನಿಸಿದ್ದಾರೆ.
ತಕ್ಷಣವೇ ವಿಮಾನ ಸಿಬ್ಬಂದಿಗೂ ದೂರು ನೀಡಿದ್ದಾರೆ. ಬಳಿಕ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಾಗ ಮಹಿಳೆ ನೀಡಿದ ದೂರಿನ ಆಧಾರದಂತೆ ಆತನನ್ನು ಬಂಧಿಸಲಾಗಿದೆ.