ಮೈಸೂರು ರಾಜವಂಶಸ್ಥರ ಸಂಬಂಧಿ ಎಂದು ಹೇಳಿಕೊಂಡು ಯುವತಿಯರಿಗೆ ವಂಚನೆ!

ಸೋಮವಾರ, 12 ಜುಲೈ 2021 (17:23 IST)
ಆನ್‌ಲೈನ್ ನ ಕನ್ನಡ ಮ್ಯಾಟ್ರಿಮೋನಿ, ಸಂಗಮ್ ಮ್ಯಾಟ್ರಿಮೋನಿ, ಮೊಬೈಲ್ ಆ್ಯಪ್ ಗಳಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ನಂತರ ಮದುವೆಯಾಗುತ್ತೆನೆಂದು ನಂಬಿಸಿ ಆರೋಪಿ ಸಿದ್ಧಾರ್ಥ್ ಕೆ. ಎಂಬಾತನನ್ನು ಬಂಧಿಸಲಾಗಿದೆ.
ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಇಂಜಿನಿಯರ್ ಎಂದು ನಕಲಿ ಪ್ರೊಫೈಲ್ ಸೃಷ್ಟಿಸಿದ್ದ ಸಿದ್ಧಾರ್ಥ್ ಕೆ. ತನ್ನ ಹೆಸರನ್ನು ಸಿದ್ಧಾರ್ಥ್ ಅರಸ್ ಎಂಬ ಹೆಸರಿನಿಂದ ಮ್ಯಾಟ್ರಿಮೋನಿ ವೆಬ್‌ಸೈಟ್‌ ಗಳಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ.
ಮೈಸೂರು ರಾಜ ವಂಶಸ್ಥರ ಕುಟುಂಬದವರ ಜೊತೆ ಬಾಲ್ಯ ಎಂದು ಸುಳ್ಳು ಹೇಳಿ ಮೈಸೂರು ಅರಸರ ಭಾವಚಿತ್ರಗಳನ್ನು ಯುವತಿಯರಿಗೆ ಕಳುಹಿಸಿಕೊಡುತ್ತಿದ್ದ. ಯುವತಿಯರ ಬಳಿ ಸ್ಪ್ಯಾನಿಷ್ ಯುಎಸ್ ಇಂಗ್ಲಿಷ್ ಭಾಷೆ ಮಾತನಾಡಿ ಸಲುಗೆ ಬೆಳೆಸಿಕೊಳ್ಳುತ್ತಿದ್ದ. ನಂತರ ವೈದ್ಯಕೀಯ, ವೈಯಕ್ತಿಕ ಕಾರಣವನ್ನು ನೀಡಿ ಯುವತಿಯರಿಂದ ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ.
ಮೈಸೂರು ಜಿಲ್ಲೆಯ ಬೈಲುಕುಪ್ಪೆ ಪಟ್ಟಣ ಪೋಲಿಸರ ಮಾಹಿತಿ ಆಧರಿಸಿ ವೈಟ್‌ಫೀಲ್ಡ್ ವಿಭಾಗದ ಸಿ.ಇ.ಎನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ 3 ಸ್ಮಾರ್ಟ್ ಫೋನ್ ಹಾಗೂ 6 ಬ್ಯಾಂಕ್ ಅಕೌಂಟ್ ಗಳ ಜಪ್ತಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ