ಫೇಸ್ ಬುಕ್ ನಲ್ಲಿ ಪತ್ತೆಯಾಯ್ತು ಕಾಣೆಯಾದ ಕನ್ನಡಕ

ಭಾನುವಾರ, 2 ಜುಲೈ 2017 (12:58 IST)
ಬೆಂಗಳೂರು: ಚಿತ್ರ ನಿರ್ಮಾಪಕರೊಬ್ಬರ ಕಾಣೆಯಾಗಿದ್ದ ಕೂಲಿಂಗ್ ಗ್ಲಾಸ್ ಫೇಸ್ ಬುಕ್ ನಲ್ಲಿ ಕಂದಿದೆ. ಈ ಸಂಬಂಧ ಬೆಂಗಳೂರಿನ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಕಿರಣ್ ತೋಂಟಂಬಾಳೆ ನವೀನ್ ಎಂಬ ಕಾರು ಶುಚಿಗೊಳಿಸುವ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.
 
ನವೀನ್ ಎಂಬಾತ ಡಾ.ಕಿರಣ್ ಕಾರನ್ನು ಶುಚಿಗೊಳಿಸುವ ಕೆಲಸ ಮಾಡುತ್ತಿದ್ದ. ಇದರಿ ದ ನಂಬಿಕೆಯಿಟ್ಟ ಕಿರಣ್, ತಮ್ಮ ಬೆಲೆಬಾಳುವ ವಸ್ತುಗಳನ್ನು ಕಾರಲ್ಲೆ ಇಟ್ಟು ಹೊರಹೋಗುತ್ತಿದ್ದರು. ಈ ವೇಳೆ ಕಾರಲ್ಲಿದ್ದ ವಸ್ತುಗಳು ಕಾಣೆಯಾಗುತ್ತಿದ್ದವು. ಹೀಗೆ ಜೂನ್ 20ರಂದು ಕಾರು ಶುಚಿಗೊಳಿಸಲು ಬಂದಿದ್ದ ನವೀನ್ 20 ಸಾವಿರ ಬೆಲೆಬಾಳುವ ಮೊಬೈಲ್ ಫೋನ್ ಮತ್ತು ಕೂಲಿಂಗ್ ಗ್ಲಾಸ್ ಕಳವು ಮಾಡಿದ್ದ ಎನ್ನಲಾಗಿದೆ.
 
ಕದ್ದ ಕನ್ನಡಕವನ್ನು ಮಗನಿಗೆ ಹಾಕಿ ಫೋಟೊ ತೆಗೆದು ಅದನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದ ನವೀನ್. ಇತ್ತೀಚೆಗೆ ಡಾ.ಕಿರಣ್ ಅವರು ಫೇಸ್ ಬುಕ್ ನೋಡಿದಾಗ ಅವರ ಕಾಣೆಯಾದ ಕನ್ನಡಕ ನವೀನ್ ಮಗನ ಮುಖದಲ್ಲಿರುವುದು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಮನೆಯ ಸಿಸಿಟಿವಿಯನ್ನು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
 

ವೆಬ್ದುನಿಯಾವನ್ನು ಓದಿ