ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸಮರ್ಥರಿದ್ದಾರೆ, ನಾನ್ಯಾಕೆ ಮೂಗು ತೂರಿಸಲಿ : ಎಚ್.ಡಿ.ಕುಮಾರಸ್ವಾಮಿ
ಸೋಮವಾರ, 13 ಸೆಪ್ಟಂಬರ್ 2021 (11:57 IST)
ಮಂಡ್ಯ : ಸಕ್ಕರೆ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಸಾಕಷ್ಟು ಸದ್ದು ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆ ತಡೆಯಲು ಸಮರ್ಥರಿದ್ದಾರೆ. ಹೀಗಿರುವಾಗ ನಾನ್ಯಾಕೆ ಮೂಗು ತೂರಿಸಲಿ ಎಂದು ಸಂಸದೆ ಸುಮಲತಾ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಗಣಿಗಾರಿಕೆ ತಡೆಯಲು ದೊಡ್ಡ ಸಾಮರ್ಥ್ಯ ಹೊಂದಿದವರು ಇದ್ದಾರೆ. ನಾನು ಈ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ, ಸಮರ್ಥರೇ ಮಂಡ್ಯ ಗಣಿಗಾರಿಕೆ ನಿಲ್ಲಿಸಲಿದ್ದಾರೆ. ಅವರೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ ಎಂದರು.
ಇನ್ನು ಈ ಮೊದಲು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸದನದಲ್ಲಿ ದನಿ ಎತ್ತುವುದಾಗಿ ಜಿಲ್ಲಾ ಜೆಡಿಎಸ್ ಶಾಸಕರು ಹೇಳಿದ್ದರು. ಆದರೆ, ಈಗ ಈ ವಿಚಾರದಲ್ಲಿ ಕುಮಾರಸ್ವಾಮಿ ಮೂಗು ತೂರಿಸುವುದಿಲ್ಲ ಎಂದಿದ್ದಾರೆ.