ಸಡಗರದ ಶೋಭಾಯಾತ್ರೆ – ಅದ್ಧೂರಿ ತೆರೆ ಕಂಡ ಮಂಗಳೂರು ದಸರಾ

ಮಂಗಳವಾರ, 8 ಅಕ್ಟೋಬರ್ 2019 (18:06 IST)
ಮಂಗಳೂರು ದಸರಾ ಹಬ್ಬಕ್ಕೆ ಅದ್ಧೂರಿಯಾಗಿ ತೆರೆ  ಬಿದ್ದಿದೆ.

ಇದೇ ಮೊದಲ ಬಾರಿಗೆ ಮೆರವಣಿಗೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ನವದುರ್ಗೆಯರು ಹಾಗೂ ಶಾರದೆ  ಮಾತೆ ಗಣಪತಿ ಮೂರ್ತಿ  ಮೆರವಣಿಗೆಯಲ್ಲಿ ಮೊದಲು ಕಾಣಲಿದೆ.  

ಮಂಗಳೂರು ದಸರಾ ಶೋಭಾ ಯಾತ್ರೆ ಎಂದರೆ ಸಾಕು. ಜನ ಸಾಗರವೇ ಹರಿದು ಬರುತ್ತದೆ.  ಕ್ಷೇತ್ರ ದಿಂದ ಸಂಜೆ 4 ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಮೆರವಣಿಗೆ ಆರಂಭಗೊಂಡರೇ ಮರು ದಿನ ಬೆಳಿಗ್ಗೆ ವೇಳೆ ಶಾರದಾ ವಿಸರ್ಜನೆ  ನಡೆಯುತ್ತಿದೆ.

ಸುಮಾರು 16 ಗಂಟೆಗಳ ಕಾಲ ಮೆರವಣಿಗೆ ಸಾಗುತ್ತದೆ. 8 ಕಿಲೋಮಿಟರ್ ದೂರ ಮೆರವಣಿಗೆ ಸಾಗಲಿದೆ. ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡ ಮೆರವಣಿಗೆ ಅಳಕೆ, ಮಣ್ಣಗುಡ್ಡೆ, ಲೇಡಿ ಹಿಲ್, ಲಾಲ್ ಬಾಗ್, ಎಂ ಜಿ ರಸ್ತೆ, ಪಿ ವಿ ಎಸ್, ನವಭಾರತ ಸರ್ಕಲ್, ಕೆ ಎಸ್ ರಾವ್ ರಸ್ತೆ, ಹಂಪನಾ ಕಟ್ಟೆ, ಜಿ ಹೆಚ್ ಯಸ್ ರಸ್ತೆ, ಕಾರ್ ಸ್ಟ್ರೀಟ್, ನ್ಯೂ ಚಿತ್ರ ಅಳಕೆ ಮೂಲಕ ಸಂಚರಿಸಿ  ಬೆಳಿಗ್ಗೆ ಕ್ಷೇತ್ರದ
 ಪುಷ್ಕರಣಿಯಲ್ಲಿ ನವದುರ್ಗೆಯರು ಹಾಗೂ ಶಾರದಾ ವಿಸರ್ಜನೆ ನಡೆಯುತ್ತದೆ.

ಶಾರದಾ ಶೋಭಾ ಯಾತ್ರೆಯಲ್ಲಿ  ಕೇರಳದ ಬಣ್ಣ ಬಣ್ಣದ ಕೊಡೆಗಳು ಕೇರಳದ ಚೆಂಡೆ ವಾದನ, ಡೊಳ್ಳು  ಕುಣಿತ,  ಹುಲಿ ವೇಷಧಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು  ಜನಾಕರ್ಷಣೆ ಪಡೆದವು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ