ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಅವರ ಸಾಹಿತ್ಯಗಳು ಬಹಳಷ್ಟು ನೆರವಾಗಿದೆ ಎಂದು ಮುಖ್ಯಮಂತ್ರಿ ಗಳು ಹೇಳಿದರು. ಸೃಜನಶೀಲತೆಯೇ ಪ್ರಮುಖ ಅಂಶವಾಗಿದ್ದ ಗೋವಿಂದ ಪೈ ಅವರ ಸಾಹಿತ್ಯ, ಅವರು ನಿಧನರಾಗಿ 54 ವಷ೯ ಕಳೆದರೂ ಇನ್ನೂ ಸಾವ೯ಕಾಲಿಕವಾಗಿದೆ. ಸಾಹಿತಿಗಳಿಗೆ ಯಾವುದೇ ಪ್ರದೇಶ ಸೀಮಿತವಿಲ್ಲ. ಹೀಗಾಗಿಯೇ ಗೋವಿಂದ ಪೈ ಅವರ ಕೀತಿ೯ ಎಲ್ಲಡೆಗೂ ಪಸರಿಸುವಂತಾಯಿತು ಎಂದು ಮುಖ್ಯಮಂತ್ರಿಗಳು ಹೇಳಿದರು.
ಹೆಚ್ಚುವರಿ 1ಕೋಟಿ ಘೋಷಣೆ: ಮಂಜೇಶ್ವರ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರಕ್ಕೆ ಕನಾ೯ಟಕ ಸರಕಾರವು ಈಗಾಗಲೇ ಒಂದು ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಮಂಜೇಶ್ವರ ಕನ್ನಡ ಸಾಹಿತ್ಯದ ಅಭಿವೃದ್ಧಿ ಗೆ ಬೆಂಬಲ ನೀಡಿದ ಕೇರಳ ರಾಜ್ಯ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿಗಳು, ಇದೊಂದು ಅತ್ಯುತ್ತಮ ಕೆಲಸವಾಗಿದ್ದು, ಹೆಮ್ಮೆಯ ವಿಚಾರ ಎಂದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಉತ್ತಮ ಕಾಯ೯ಗಳಿಗಾಗಿ ಎರಡು ರಾಜ್ಯಗಳು ಜತೆ ಸೇರಿದರೆ ಯಾವುದನ್ನು ಸಾಧಿಸಬಹುದು ಎಂಬುದಕ್ಕೆ ಗೋವಿಂದ ಪೈ ಸಾಂಸ್ಕೃತಿಕ ಕೇಂದ್ರವೇ ಸಾಕ್ಷಿಯಾಗಿದೆ. ಭಾಷೆ-ಜಾತಿ-ಧಮ೯ದ ಹೆಸರಿನಲ್ಲಿ ಕಿತ್ತಾಡುವವರು ಗೋವಿಂದ ಪೈ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಈ ಎಲ್ಲಾ ಗಡಿಗಳನ್ನು ಮೀರಿರುವ ಅವರ ಸಾಹಿತ್ಯಗಳು ಭಾರತದ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆಗಳಾಗಿವೆ. ಈ ಸಾಂಸ್ಕೃತಿಕ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿಗೆ ಕೇರಳ ಸರಕಾರ ಸದಾ ಬೆಂಬಲವಾಗಿರಲಿದೆ ಎಂದು ಕೇರಳ ಮುಖ್ಯಮಂತ್ರಿಗಳು ಹೇಳಿದರು.