ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ, ಕೊವಿಡ್ ಹರಡದಂತೆ ಕ್ರಮ ಕೈಗೊಳ್ಳುವುದು, ಕೊವಿಡ್ ನಿಯಮ ಪಾಲನೆ, ಕೊವಿಡ್ ಟೆಸ್ಟ್, ಬೂಸ್ಟರ್ ಡೋಸ್, ಜಿನೋಮಿಕ್ ಸೀಕ್ವೆನ್ಸ್, ಕೊರೋನಾ ರೂಪಾಂತರ ತಳಿ ತಡೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಚೀನಾದ ಉನ್ನತ ಆರೋಗ್ಯ ಅಧಿಕಾರಿಯ ಪ್ರಕಾರ, ಈ ಚಳಿಗಾಲದಲ್ಲಿ ಕೊವಿಡ್ ಸೋಂಕಿನ ಮೂರು ಸಂಭವನೀಯ ಅಲೆಗಳಲ್ಲಿ ಚೀನಾ ಮೊದಲನೆಯದನ್ನು ಎದುರಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಅತ್ಯಂತ ತೀವ್ರವಾದ ನಿರ್ಬಂಧಗಳನ್ನು ತೆಗೆದು ಹಾಕಿದಾಗಿನಿಂದ, ದೇಶವು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.