ಮದುವೆಯಾದ ಮೇಲೂ ಮಾಜಿ ಲವ್ವರ್ ಮೇಲಿನ ಪ್ರೀತಿಗೆ ಮಹಿಳೆ ಮಾಡಿದ್ದೇನು?!

ಮಂಗಳವಾರ, 18 ಜನವರಿ 2022 (09:20 IST)
ಬೆಂಗಳೂರು: ಮದುವೆಯಾದ ಮಹಿಳೆಯೊಬ್ಬಳು ತನ್ನ ಹಳೇ ಪ್ರೀತಿಯನ್ನು ಮರೆಯಲಾಗದೇ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಮದುವೆಯಾದ ಬಳಿಕವೂ ಪ್ರಿಯತಮನ ಜೊತೆ ಮಹಿಳೆಗೆ ಸಂಪರ್ಕವಿತ್ತು. ಇದೇ ಕಾರಣಕ್ಕೆ ಈ ಜೋಡಿ ಓಡಿ ಹೋಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದಿದ್ದರು.

ಅದೇ ಬಾಡಿಗೆ ಮನೆಯಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಕೊಳೆತ ವಾಸನೆ ಬರುತ್ತಿದ್ದ ಕಾರಣಕ್ಕೆ ನೆರೆಹೊರೆಯವರು ಸ್ಥಳಕ್ಕೆ ಹೋಗಿ ನೋಡಿದಾಗ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ