ಅಬ್ಬಾ……ಮಾರುತಿ ಹಣ್ಣುಕಾಯಿ ಎಷ್ಟಕ್ಕೆ ಹರಾಜಾಯ್ತು ಗೊತ್ತ?!

ಸೋಮವಾರ, 3 ಜನವರಿ 2022 (07:07 IST)
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪ್ರಸಿದ್ಧ ಶ್ರೀ ಮಾರುತಿ ದೇವಸ್ಥಾನದಲ್ಲಿ ದೇವರಿಗೆ ನೈವೆದ್ಯ ಇರಿಸಿದ್ದ ಹಣ್ಣುಕಾಯಿ ಪ್ರಸಾದವು ಬರೋಬ್ಬರಿ 2.50 ಲಕ್ಷಕ್ಕೆ ಹರಾಜು ಮಾಡಲಾಗಿದ್ದು,
 
ಕಾರವಾರ ನಗರದ ಬ್ರಾಹ್ಮಣ ಗಲ್ಲಿಯ ಮಾರುತಿ ದಾಮೋದರ್ ಸ್ವಾರ್ ಎಂಬ ವ್ಯಾಪಾರಿಯು ಹರಾಜಿನಲ್ಲಿ ಪ್ರಸಾದವನ್ನು ಪಡೆದುಕೊಂಡರು.

ಪ್ರತಿ ವರ್ಷ ಜನವರಿಯಲ್ಲಿ ಕಾರವಾರದ ಶ್ರೀ ಮಾರಿತಿ ದೇವಸ್ಥಾನದ ಜಾತ್ರಾಮಹೊತ್ಸವ ಹಾಗೂ ಪಲ್ಲಕ್ಕಿ ಉತ್ಸವ ನೆಡೆಸಲಾಗುತ್ತದೆ.
ಈ ಬಾರಿ ಸಹ ಈ ಹರಾಜಿನಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಹೀಗಾಗಿ ದೇವರ ಪ್ರಸಾದಕ್ಕೆ ಭಕ್ತರಲ್ಲಿ ಪೈಪೋಟಿಯ ಹರಾಜು ಪ್ರಕ್ರಿಯೆ ನಡೆದು ಕೊನೆಯಲ್ಲಿ 2.50 ಲಕ್ಷಕ್ಕೆ ಹರಾಜು ಮುಕ್ತಾಯವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ