ಮಾಸ್ಕ್‌ಮ್ಯಾನ್‌ ಬಂಧನ, ಸುಜಾತಾ ತಪ್ಪೊಪ್ಪಿಗೆ, ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ

Sampriya

ಶನಿವಾರ, 23 ಆಗಸ್ಟ್ 2025 (16:23 IST)
ಬೆಳ್ತಂಗಡಿ: ಅನನ್ಯಾ ಭಟ್‌ ಎಂಬ ಮಗಳಿದ್ದಳು ಎನ್ನುವುದು ಸುಳ್ಳು ಎಂದು ಸುಜಾತಾ ಭಟ್‌ ತಪ್ಪೊಪ್ಪಿಕೊಂಡ ವಿಚಾರದ ಸಲುವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯಿಸಿದ್ದಾರೆ. 

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಒಂದೊಂದೇ ಸತ್ಯ ಇದೀಗ ಹೊರಬೀಳುತ್ತಿದೆ. ಧರ್ಮಸ್ಥಳದ ಕ್ಷೇತ್ರದ ಮೇಲೆ  ನಿಮ್ಮ ಅಭಿಮಾನ ಪ್ರೀತಿ ಹೀಗೇ ಇರಲಿ. ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ಇನ್ನಷ್ಟು ಸತ್ಯ ತನಿಖೆಯಿಂದ ಹೊರಬೀಳಲಿದೆ. ಈ ಮೂಲಕ ಧರ್ಮಸ್ಥಳದ ಮೇಲಿದ್ದ ಎಲ್ಲ ಆರೋಪಗಳು ತೊಳೆದಂತಾಗಿದೆ ಎಂದು ಅವರು ಹೇಳಿದರು. 

ಇನ್ನೂ ಧರ್ಮಸ್ಥಳದ ವಿಚಾರವಾಗಿ ನಡೆಯುತ್ತಿರುವ ಬುರುಡೆ ರಹಸ್ಯದಲ್ಲಿ ಮಾಸ್ಕ್‌ಮ್ಯಾನ್ ಅರೆಸ್ಟ್‌, ಅನನ್ಯಾ ಭಟ್ ಎನ್ನುವ ಮಗಳಿಂದಳು ಎಂಬ ಸುಜಾತಾ ಭಟ್ ತಪ್ಪೊಪ್ಪಿಕೊಂಡು, ಇದೀಗ ತನಿಖೆ ಹೊಸ ತಿರುವು ಪಡೆದುಕೊಂಡಿದೆ.

ಇನ್ನೂ ಹೊಸ ಬೆಳವಣಿಗೆ ಬೆನ್ನಲ್ಲೇ ಧರ್ಮಸ್ಥಳ ಕ್ಷೇತ್ರದ ಅಧಿಕೃತ ಖಾತೆಯಿಂದ ಶಿವತಾಂಡವ ಪೋಟೋವನ್ನು ಶೇರ್ ಮಾಡಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ