ಎಲ್ಲಾ ಒಳಪಗಡಗಳನ್ನು ಕೇಂದ್ರ ಒ ಬಿ ಸಿ ಮೀಸಲಾತಿಗೆ ಸೇರಿಸಲು ಮಠಾ ಧೀಶರಿಂದ ಆಗ್ರಹ

ಶುಕ್ರವಾರ, 2 ಜೂನ್ 2023 (15:36 IST)
ವೀರಶೈವ ಲಿಂಗಯುತ ಮಠಾಧೀಶರ ವೇದಿಕೆ ಇಂದ ಸುದ್ದಿಘೋಷ್ಠಿ ನಡೆಸಲಾಗಿದೆ.ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸುದ್ದಿ ಘೋಷ್ಠಿ ನಡೆಸಿದ್ದು,ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಯುತ ಎಲ್ಲಾ ಒಳಪಗಡಗಳನ್ನು ಕೇಂದ್ರ ಒ ಬಿ ಸಿ ಮೀಸಲಾತಿಗೆ ಸೇರಿಸಲು ಮಠಾ ಧೀಶರಿಂದ ಆಗ್ರಹ ಮಾಡಿದ್ದಾರೆ.ವೀರಶೈವ ಲಿಂಗಯುತ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು  OBC ಪಟ್ಟಿಗೆ ಸೇರ್ಪಡೆಗೊಳಿಸಲು ವೀರಶೈವ ಲಿಂಗಯುತ ಮಠಧೀಶರ ವೇದಿಕೆ ಯಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೂರಕ್ಕೂ ಹೆಚ್ಚು ಮಠಾಧೀಶರಿಂದ ಸುದ್ದಿಘೋಷ್ಠಿ ನಡೆಸಿ ವೀರಶೈವ ಲಿಂಗಯುತ ಸಮುದಾಯದಲ್ಲಿ 90 ಕ್ಕೂ ಹೆಚ್ಚು ಉಪಜಾತಿಗಳಿವೆ.OBC ಪಟ್ಟಿಗೆ 16 ವೀರಶೈವ ಲಿಂಗಯುತ ಸಮುದಾಯದ ಉಪಜಾತಿಗಳು ಸೇರ್ಪಡೆ ಗೊಂಡಿವೆ.ಕರ್ನಾಟಕ ಸರ್ಕಾರದ ಪ್ರಸ್ತುತ 2002 ರ OBC ಪಟ್ಟಿಯಲ್ಲಿ ಇಡೀ ವೀರಶೈವ ಲಿಂಗಯುತ ಸಮುದಾಯವನ್ನ ಸೇರಿಸಲಾಗಿದೆ.ವೀರಶೈವ ಲಿಂಗಯುತ ನಿಗಮದ ಮಾಜಿ ಅಧ್ಯಕ್ಷ ಬಿ. ಎಸ್ ಪರಮಾಶವಯ್ಯ, ವೀರಶೈವ ಲಿಂಗಯುತ ಮುಖಂಡ ಗುರುಸ್ವಾಮಿ,ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಪತ್ರಿಕಾ ಘೋಷ್ಠಿ ಯಲ್ಲಿ ಇನ್ನಿತರ ವೀರಶೈವ ಲಿಂಗಯುತ ಮುಖಂಡರು, ಸ್ವಾಮೀಜಿಗಳು ಭಾಗಿಯಾಗಿದ್ದಾರೆ‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ