ಗ್ಯಾರಂಟಿ ಯೋಜನೆ ನೀವೇ ಬೇಡ ಹೇಳಿ: ಸಚಿವ ಎಂಬಿ ಪಾಟೀಲ್ ರಿಕ್ವೆಸ್ಟ್

Krishnaveni K

ಸೋಮವಾರ, 2 ಮಾರ್ಚ್ 2026 (09:36 IST)
ಬೆಂಗಳೂರು: ಇತ್ತೀಚೆಗಷ್ಟೇ ಡಿಕೆ ಶಿವಕುಮಾರ್ ಗ್ಯಾರಂಟಿ  ಯೋಜನೆಯಿಂದ ಆರ್ಥಿಕ ಹೊರೆಯಾಗ್ತಿದೆ ಎಂದಿದ್ದರು. ಇದೀಗ ಸಚಿವ ಎಂಬಿ ಪಾಟೀಲ್ ಸರದಿ. ನೀವೇ ಗ್ಯಾರಂಟಿ ಬೇಡ ಎಂದು ತ್ಯಜಿಸಿ ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ನೀಡುವುದಾಗಿ ಘೋಷಿಸಿ ಕಾಂಗ್ರೆಸ್ ಸರ್ಕಾರ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಈಗ ಎರಡು ವರ್ಷಕ್ಕೇ ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆಡಳಿತ ಪಕ್ಷದವರಿಂದಲೇ ಅಸಮಾಧಾನ ಕೇಳಿಬರುತ್ತಿದೆ.

ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಕೈ ಬಿಡುವುದು ಒಳ್ಳೆಯದು. ಅರ್ಹ ಬಿಪಿಎಲ್ ಕುಟುಂಬದವರು ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆಯಬೇಕು. ಶ್ರೀಮಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುವಂತೆ ಆಗಬಾರದು ಎಂದಿದ್ದಾರೆ. ಈ ಮೊದಲು ಡಿಕೆ ಶಿವಕುಮಾರ್ ಗ್ಯಾರಂಟಿಯಿಂದ ಆರ್ಥಿಕ ಹೊರೆಯಾಗ್ತಿದೆ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ