ಮಾಧ್ಯಮದವರ ಕಾರ್ಯ ಶೈಲಿ ಕುರಿತು ಸಿಎಂ ಮತ್ತೊಮ್ಮೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ತೋಟಿ ಗ್ರಾಮದಲ್ಲಿ ಸಿಎಂ ಭಾಷಣ ಮಾಡುವಾಗ, ಮಾಧ್ಯಮದವರ ಕಾರ್ಯ ಶೈಲಿ ಕುರಿತು ಸಿಎಂ ಮತ್ತೊಮ್ಮೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರಿಗೆ ನನ್ನ ಮೇಲೆ ಪ್ರೀತಿ ಇದೆ. ಆದ್ರೆ ಮಾಧ್ಯಮಗಳ ಮೇಲೆ ಕೆಲವು ಬೇರೆ ರೀತಿಯ ಒತ್ತಡಗಳಿವೆ. ಹೀಗಾಗಿ ಸದಾ ಸರ್ಕಾರ ಬೀಳುತ್ತದೆ ಎನ್ನುವ ಸುದ್ದಿ ಪ್ರಸಾರ ಬಿತ್ತರಿಸಲಾಗುತ್ತಿದೆ. ಮಾಧ್ಯಮಗಳು ನನ್ನ ಕಾರ್ಯಕ್ರಮಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ನನ್ನ ಶಾಸಕರನ್ನು ಹಣ ಕೊಟ್ಟು ಕೊಂಡುಕೊಂಡು ಸರ್ಕಾರ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಸರ್ಕಾರ ಟೇಕ್ ಆಫ್ ಆಗಿಲ್ಲ ಎನ್ನುವ ಬಿ.ಎಸ್.ವೈ. ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ಟೇಕ್ ಆಫ್ ಆಗಲು ನೀವು ಬಿಡಿ ಎಂದರು.
ಜನಪರವಾದ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ದಂಗೆ ಏಳಲು ಜನರಿಗೆ ಕರೆ ಕೊಡುತ್ತಿದ್ದೇನೆ.
ಒಂದು ವೇಳೆ ನಾನು ಜನರಿಗೆ ದ್ರೋಹ ಮಾಡಿದರೆ, ನನ್ನಿಂದ ತಪ್ಪಾದರೆ ಜನರು ನನ್ನ ವಿರುದ್ಧವೂ ದಂಗೆ ಏಳಲಿ.
ಜನರ ಆದೇಶವನ್ನು ನಾನು ಶಿರಸಾವಹಿಸಿ ಪಾಲಿಸುತ್ತೇನೆ. ನನ್ನ ಜಿಲ್ಲೆಯ ಪುಣ್ಯ ಭೂಮಿಯಿಂದ ಬಿಜೆಪಿ ವಿರುದ್ಧ ದಂಗೆ ಏಳಲು ಕರೆ ಕೊಡುತ್ತಿದ್ದೇನೆ ಎಂದು ಭಾವನಾತ್ಮಕ ಭಾಷಣ ಮಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ.
ನಾನು ಮಜಾ ಮಾಡಲು ಮುಖ್ಯಮಂತ್ರಿ ಆಗಿಲ್ಲ. ನಾಡಿನ ಯುವಕರು, ಮಹಿಳೆಯರು, ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಶಾಶ್ವತ ವ್ಯವಸ್ಥೆ ಮಾಡುವುದು ನನ್ನ ಕನಸು ಎಂದರು.