ಭಾರೀ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಅ.4 ರಂದು ಚುನಾವಣೆ ನಡೆಯಲಿದೆ. ಆದರೆ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸದ ಕಾರಣ ಮೈತ್ರಿ ಸರಕಾರದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ.
ಅಗತ್ಯ ಶಾಸಕರ ಬೆಂಬಲ ಗೆಲ್ಲಲು ಬಿಜೆಪಿಗೆ ಇಲ್ಲ. ಆದರೂ ಕಾಂಗ್ರೆಸ್, ಜೆಡಿಎಸ್ ನ ಆಂತರಿಕ ಕಚ್ಚಾಟದ ಲಾಭ ಪಡೆದುಕೊಳ್ಳಲು ಬಿಜೆಪಿ ಹವಣಿಸಿತ್ತು. ಆದರೆ ಕೊನೆ ಘಳಿಗೆ ಬಿಜೆಪಿ ಯು ಟರ್ನ ಹೊಡೆದಿದೆ.
ಬಿಜೆಪಿಯ 5 ಜನ ಅತೃಪ್ತ ಶಾಸಕರಿಗೆ ಜೆಡಿಎಸ್ ಗಾಳ ಹಾಕಿತ್ತು. ಹೀಗಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರೂಪಿಸಿದ್ದ ಯೋಜನೆ ಅರಿತ ಬಿಜೆಪಿ ತನ್ನ ನಿರ್ಧಾರವನ್ನು ಬದಲಿಸಿದೆ. ಕಣಕ್ಕೆ ಅಭ್ಯರ್ಥಿಗಳನ್ನು ಇಳಿಸಲು ಮುಂದಾಗಿಲ್ಲ.
ಬಿಜೆಪಿ ಅಭ್ಯರ್ಥಿ ಕಣದಲ್ಲಿ ಇಲ್ಲದಿರುವುದರಿಂದ ಕಾಂಗ್ರೆಸ್ ನ ಇಬ್ಬರು ಹಾಗೂ ಜೆಡಿಎಸ್ ನ ಒರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ.