ಮಿಲಿಟರಿ ಅಧಿಕಾರಿ ಎಂದು ಮೂವರು ಮಹಿಳೆಯರಿಗೆ ಮದುವೆ ನೆಪದಲ್ಲಿ ವಂಚಿಸಿದವ ಅರೆಸ್ಟ್

ಭಾನುವಾರ, 11 ಏಪ್ರಿಲ್ 2021 (09:32 IST)
ಬೆಂಗಳೂರು : 26 ವರ್ಷದ ಯುವಕನೊಬ್ಬ ಮಿಲಿಟರಿ ಅಧಿಕಾರಿಯಾಗಿ ನಟಿಸಿ ಜನರನ್ನು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುವಕ ಮಿಲಿಟರಿ ಅಧಿಕಾರಿ ಎಂದು ಮೂವರು ಮಹಿಳೆಯರಿಗೆ ಮುವೆಯಾಗುವ ಭರವಸೆ ನೀಡಿ ಅವರಿಂದ 3ಲಕ್ಷ ರೂ ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೇ ಮಿಲಿಟರಿ ಕ್ಯಾಂಟೀನ್ ನಲ್ಲಿ ಕಾರುಗಳು ಮತ್ತು ಮೋಟಾರು ಬೈಕ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವುದಾಗಿ ಹೇಳಿ ಇತರ ಆರು ಮಂದಿಯಿಂದ ಲಕ್ಷ ರೂಪಾಯಿ ವಂಚಿಸಿದ್ದಾನೆ.

ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ