ಅಕ್ಟೋಬರ್ 24ರವರೆಗೆ 14ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.ಕೊಡಗು ಹಾಗೂ ಮೈಸೂರಿನಲ್ಲಿ ಅತಿ ಹೆಚ್ಚು ಮಳೆ ಸಾಧ್ಯತೆ ಇದೆ ಹೀಗಾಗಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಹಾಸನ, ಮಂಡ್ಯ, ಶಿವಮೊಗ್ಗ,ವಿರಾಜಪೇಟೆ, ಮಂಗಳೂರು ವಿಮಾನ ನಿಲ್ದಾಣ, ಜಯಪುರ, ಪಣಂಬೂರು,ಉಡುಪಿ, ಟಿ ನರಸೀಪುರ, ಹುಣಸೂರು, ಮಾಣಿ, ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ಯಲ್ಲಾಪುರ, ಕದ್ರಾ, ಗೋಕರ್ಣ, ಸಿದ್ದಾಪುರ, ಶೃಂಗೇರಿ, ಮೈಸೂರು, ಮುಲ್ಕಿ, ಪುತ್ತೂರು, ಕಿರವತ್ತಿ, ಕೋಟ, ಕೊಲ್ಲೂರು, ಕಡೂರು, ತರೀಕೆರೆ, ಕಮ್ಮರಡಿ, ಹಾರಂಗಿ,ಅರಕಲಗೂಡು, ಹಾಸನ, ಬೆಳ್ಳೂರು, ಕುಣಿಗಲ್ನಲ್ಲಿ ಮಳೆ ಸಾಧ್ಯತೆ ಇದೆ.ನೈಋತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.