ಕಿರಿಕಿರಿ ಆಗದಂತೆ ಧ್ವನಿವರ್ಧ ಕಗಳಲ್ಲಿ ಸಂಗೀತ ಹಾಕುವುದನ್ನು ನಿಷೇಧ ಮಾಡಿದ ಮೆಟ್ರೋ ರೈಲು ನಿಗಮ
ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರಿಗೆ ತೊಂದರೆ ಹಿನ್ನೆಲೆ ಕಿರಿಕಿರಿ ಆಗದಂತೆ ಧ್ವನಿವರ್ಧ ಕಗಳಲ್ಲಿ ಸಂಗೀತ ಹಾಕುವುದನ್ನು ಮೆಟ್ರೋ ರೈಲು ನಿಗಮ ನಿಷೇಧ ಮಾಡಿದೆ.ಸಾರ್ವಜನಿಕ ತೊಂದರೆ ತಪ್ಪಿಸುವ ಸಲುವಾಗಿ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಲೌಡ್ ಸೀಕರ್ ಮೂಲಕ ಸಂಗೀತ ಪ್ರಸಾರ ಮಾಡಬಾರದು.ಆದರೆ ಇಯರ್ ಫೋನ್ ಬಳಸಿ ಸಂಗೀತ ಆಲಿಸಲು ಅವಕಾಶ ಇದೆ.ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದು,ಮೆಟ್ರೋ ರೈಲುಗಳಲ್ಲಿ ದೊಡ್ಡದಾಗಿ ಸಂಗೀತ ಹಾಕುವುದು ಸರಿಯಲ್ಲ.ಇತರೆ ಪ್ರಯಾಣಕರಿಗೆ ಇದು ಕಿರಿಕಿರಿ ಉಂಟುಮಾಡುತ್ತದೆ.ವಿದ್ಯಾರ್ಥಿಗಳು, ಉದ್ಯೋಗಿಗಳು ಪ್ರಯಾಣಿಸುವಾಗ ಓದುವುದು, ಲ್ಯಾಪ್‌ಟಾಪ್‌ನಲ್ಲಿ ಕೆಲಸಮಾಡುವುದನ್ನು ಕಾಣುತ್ತೇವೆ ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ದೂರವಾಣಿಯಲ್ಲಿ ಮಾತನಾಡುತ್ತಾರೆ.ದೊಡ್ಡದಾಗಿ ಮ್ಯೂಸಿಕ್ ಹಾಕಿದರೆ ಸಹಜವಾಗಿ ತೊಂದರೆ ಆಗುತ್ತದೆ ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.