ಚಂಪಾಕಧಾಮ ಸ್ವಾಮಿ ದೇವಸ್ಥಾನದಲ್ಲಿ ಮಿನಿ ದಸರಾ
ವಿಜಯದಶಮಿ ಹಿನ್ನೆಲೆಯಲ್ಲಿ ಮೈಸೂರಿನ ವಿಶ್ವ ವಿಖ್ಯಾತ ಚಾಮುಡೇಶ್ವರಿ ಜಂಬೂ ಸವಾರಿಯನ್ನ ರಾಜ್ಯದ ಜನ ಕಣ್ಣು ತುಂಬಿಕೊಂಡಿರೋದು ಒಂದು ಕಡೆಯಾದರೆ, ಬೆಂಗಳೂರು ಹೊರವಲಯದ ಬನ್ನೇರುಘಟ್ಟದಲ್ಲಿ ಮೈಸೂರು ಮಾದರಿಯಲ್ಲಿಯೇ ಮಿನಿ ದಸರಾ ಜಂಬೂ ಸವಾರಿ ನೆರವೇರಿಸಲಾಯಿತು.
ಬನ್ನೇರುಘಟ್ಟದ ಐತಿಹಾಸಿಕ ಚಂಪಕಧಾಮಸ್ವಾಮಿ ದೇವರ ಉತ್ಸವ ಮೂರ್ತಿಯನ್ನ ಆನೆಯ ಮೇಲೆ ಕೂರಿಸಿ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಜಾನಪದ ಕಲಾ ತಂಡಗಳ ನೃತ್ಯ ವೈಭವ ಗಮನ ಸೆಳೆಯಿತು. ಚಂಪಕಧಾಮ ಸ್ವಾಮಿಯ ಮೂರ್ತಿಯನ್ನ ಹೊತ್ತು ಸಾಗಿದ ಗಜರಾಜನನ್ನು ನೋಡಿದ ಭಕ್ತರು ಜೈಕಾರ ಹಾಕಿದ್ರು.