ಲಾಕ್ ಡೌನ್ ಪಾಲನೆ ಮಾಡುತ್ತಿರುವ ಜನರಿಂದಾಗಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಹತೋಟಿಗೆ ಬರುತ್ತಿದೆ. ಹೀಗಂತ ರಾಜ್ಯದ ಸಚಿವರೊಬ್ಬರು ಹೇಳಿದ್ದಾರೆ.
ಕರ್ನಾಟಕಕ್ಕೆ ಕೊರೊನಾ ವೈರಸ್ ಕಾಲಿಟ್ಟ ನಂತರ ಇಲ್ಲಿಯವರಿಗೆ 98 ಪಾಜಿಟಿವ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6 ಜನ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. 3 ಜನ ಸಾವನ್ನಪ್ಪಿದ್ದು, 3,243 ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದರಲ್ಲಿ 3025 ನೆಗಟಿವ್ ಬಂದಿದೆ. ಸಾಕಷ್ಟು ಪ್ರಯತ್ನ ಮಾಡಿದ ನಂತರ ಅಷ್ಟೋ ಇಷ್ಟೋ ಕಂಟ್ರೋಲ್ ಗೆ ಬಂದಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಕರ್ನಾಟಕದ 54 ಜನರು ಭಾಗಿಯಾಗಿದ್ದು, ಮಾಹಿತಿ ಇದ್ದು ಇದರಲ್ಲಿ 13 ಜನರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಎಲ್ಲವೂ ನೆಗಟಿವ್ ವರದಿ ಬಂದಿವೆ ಕೇವಲ 15 ಜನರನ್ನು ಮಾತ್ರ ಪತ್ತೆ ಹಚ್ಚಬೇಕಿದೆ ಎಂದು ಸಚಿವರು ಹೇಳಿದ್ದಾರೆ.