13 ಸಾವಿರ ಕೋಟಿ ಸಾಲ ಕೊಡ್ತೇನೆ ಎಂದ ಸಚಿವ
ಯಾವುದೇ ತೊಂದರೆಯಾಗದಂತೆ 13 ಸಾವಿರ ಕೋಟಿ ರೂಪಾಯಿ ಸಾಲ ಕೊಡೋದಾಗಿ ಸಚಿವರೊಬ್ಬರು ಹೇಳಿದ್ದಾರೆ.
ರಾಮನಗರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರು ಮತ್ತು ತರಕಾರಿ ಮಾರಾಟಗಾರರ ಸಮಸ್ಯೆಗಳನ್ನು ಆಲಿಸಿದರು. ಕಳೆದ ಸಲದಂತೆ ಈ ಬಾರಿಯೂ 13 ಸಾವಿರ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಒಂದು ಕೊರೊನಾ ಸೋಂಕು ಕೇಸ್ ದಾಖಲಾಗಿಲ್ಲ ಇದು ಸಂತೋಷಕರ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಇದುವರೆಗೆ ಅನುಸರಿಸಿರುವ ಸೂಕ್ತ ಕ್ರಮಗಳನ್ನು ಮುಂದುವರಿಸಬೇಕು ಎಂದರು.