ಐಸೋಲೇಶನ್ ವಾರ್ಡಿನಲ್ಲಿ ಸಚಿವ ಬಿ. ಶ್ರೀರಾಮುಲು : ಅಂಥದ್ದೇನಾಯ್ತು?

ಗುರುವಾರ, 26 ಮಾರ್ಚ್ 2020 (19:26 IST)
ಕೊರೊನಾ ವೈರಸ್ ಗೆ ಚಿಕಿತ್ಸೆ ನೀಡಲಾಗುತ್ತಿರುವ ಐಸೋಲೇಶನ್ ವಾರ್ಡ್ ನಲ್ಲಿ ಸಚಿವ ಬಿ.ಶ್ರೀರಾಮುಲು ಕಾಣಿಸಿಕೊಂಡಿದ್ದಾರೆ.

ನೀವು ಧೈರ್ಯ ಕಳ್ಕೊಬೇಡಿ, ನೀಮಗೇನು ಆಗಿಲ್ಲ. ದೇವರು ದಯೆಯಿಂದ ನಿಮ್ಮದು ನೆಗೆಟಿವ್  ರಿಪೋರ್ಟ್ ಬರುತ್ತದೆ ಅಷ್ಟೇ, ಅಲ್ಲಿಯವರೆಗೆ ಐಸೋಲೇಶನ್ ವಾರ್ಡ್‍ನಲ್ಲಿರಬೇಕು. ನಿಮ್ಮೊಂದಿಗೆ ನಾವಿದ್ದೇವೆ;  ತಮಗೆ ಚಿಕಿತ್ಸೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಿಮಗೆ ದೂರವಿಟ್ಟಿದ್ದೇವೆ ಎಂದು ಅಂದುಕೊಳ್ಳಬೇಡಿ; ದೇಶ ಹಾಗೂ ಎಲ್ಲರ ಸುರಕ್ಷತೆ ದೃಷ್ಟಿಯಿಂದ ತಮ್ಮನ್ನು ಐಸೋಲೇಶನ್ ವಾರ್ಡ್‍ನಲ್ಲಿಟ್ಟಿದ್ದೇವೆ. ಹೀಗೆಂದು ಬಳ್ಳಾರಿಯಲ್ಲಿ ಸಚಿವ ಶ್ರೀರಾಮುಲು ಧೈರ್ಯ ತುಂಬಿದರು.

ಕೋವಿಡ್-19 ಹಿನ್ನೆಲೆ ಐಸೋಲೇಶನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕೋವಿಡ್ ಸುರಕ್ಷಾ ಕಿಟ್ ಧರಿಸಿ ಒಳಗಡೆ ತೆರಳಿ ಬೆನ್ನುತಟ್ಟಿ ಅವರನ್ನು ಧೈರ್ಯ ತುಂಬಿದರು.

ಜಿಲ್ಲಾಶಸ್ತ್ರಚಿಕಿತ್ಸ ಎನ್.ಬಸರೆಡ್ಡಿ ಅವರು ಐಸೋಲೇಶನ್ ವಾರ್ಡ್‍ನಲ್ಲಿ ಎಷ್ಟು ದಿನಗಳಿಂದಿರಿಸಲಾಗಿದೆ ಎಂಬುದು ಸೇರಿದಂತೆ ಕಲ್ಪಿಸಲಾಗುತ್ತಿರುವ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು.

ಶಾಸಕ ಸೋಮಶೇಖರರೆಡ್ಡಿ, ನಾಗೇಂದ್ರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಇನ್ನಿತರ ವೈದ್ಯಾಧಿಕಾರಿಗಳು ಇದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ