ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸೋಮವಾರ, 29 ಮೇ 2023 (20:48 IST)
ಗ್ಯಾರಂಟಿಗಳ ಬಗ್ಗೆ ಬಿಜೆಪಿ ಟೀಕೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.ನಾವು ಕೊಟ್ಟಂತ ಭರವಸೆಗಳನ್ನ ಕಳೆದ ಭಾರಿಯೂ ಈಡೇರಿಸಿದ್ದೇವೆ .ಬಿಜೆಪಿ ಅವರು 600 ಭರವಸೆಗಳನ್ನು ಕೊಟ್ಟು ಅದರಲ್ಲಿ 50 ಭರವಸೆಗಳನ್ನ ಮಾತ್ರ ಈಡೇರಿಸುವುದಕ್ಕೆ ಆಗಿದೆ ಅಂತೆ ,ಈಗ ಅವರ ಹತ್ತಿರ ನಾವು ಪಾಠ ಕಲಿಯೋಕೆ ಆಗುತ್ತಾ..?ನಾವು ಈ ಬಾರಿ ನಮ್ಮ ಪ್ರಣಾಳಿಕೆಯಲ್ಲಿ ಹಲವರು ಭರವಸೆಗಳನ್ನ ಕೊಟ್ಟಿದ್ದೇವೆ ಅವುಗಳನ್ನು ಮಾಡುತ್ತೇವೆ.ಅವುಗಳಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಅವುಗಳನ್ನ ನಾವು ಜಾರಿಗೆ ತರುತ್ತೇವೆ .ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ತಾತ್ವಿಕ ಒಪ್ಪಿಗೆ ಕೊಟ್ಟಿದ್ದೇವೆ .ಆರ್ಥಿಕ ಇಲಾಖೆ ಯಿಂದ ಅಧಿಕಾರಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ.ಶೀಘ್ರದಲ್ಲೇ ಮಾಡುತ್ತೇವೆ ಈವರಿಗೆ ಯಾಕೆ ಆತಂಕ .15 ದಿನಗಳಲ್ಲಿ 34 ಸಚಿವರು ಕೊಟ್ಟಿದ್ದೇವೆ .ಬಿಜೆಪಿ ಅವರಿಗೆ ವಿರೋಧ ಪಕ್ಷದ ನಾಯಕನನ್ನ ಕೊಡೊಕೆ ಆಗಿಲ್ಲ ಎಂದು ಪ್ರೀಯಾಂಕ ಖರ್ಗೆ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ