ಸಿದ್ರಾಮಯ್ಯ ಭೇಟಿಗೆ ದೌಡಾಯಿಸಿದ ಸಚಿವ ರಮೇಶ ಜಾರಕಿಹೊಳಿ

ಸೋಮವಾರ, 17 ಸೆಪ್ಟಂಬರ್ 2018 (17:38 IST)
ಬೆಂಗಳೂರಿಗೆ ಸಚಿವ ರಮೇಶ ಜಾರಕಿಹೊಳಿ ದಿಢೀರ್ ಪ್ರಯಾಣದ ಬೆಳಸಿದ ಹಿನ್ನಲೆ  ರಮೇಶ ಜಾರಕಿಹೊಳಿ ನಡೆ ತೀವ್ರ ಕುತೂಹಲ ಸೃಷ್ಟಿಸಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಚಿವ ರಮೇಶ ಜಾರಕಿಹೊಳಿ ಆಗಮಿಸಿ,  ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರು ಪ್ರವಾಸ‌ ಬೆಳೆಸಿದರು. 

ಇನ್ನು ಇದೇವೇಳೆ ಸಚಿವ ರಮೇಶ ಜಾರಕಿಹೊಳಿಗೆ ಸಂಸದ ಪ್ರಕಾಶ ಹುಕ್ಕೇರಿ  ಕೂಡಾ ಸಾಥ್ ನೀಡಿದ್ದು ತೀವ್ರ ಕುತೂಹಲ ಕೆರಳಿಸಿದೆ. ಬೆಂಗಳೂರಿನಲ್ಲಿ ಸಿದ್ದರಾಮಯ್ಯ  ಅವರನ್ನು ಭೇಟಿ ಮಾಡಿ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ  ಮಾಡುವ ಸಾಧ್ಯತೆ ಇದೆ‌. ಭೇಟಿ ಬಳಿಕ ಸಚಿವ ರಮೇಶ ಜಾರಕಿಹೊಳಿ ಮುಂದಿನ ನಿರ್ಧಾರ ಏನು?  ಮಾಜಿ ಸಿಎಂ ಸಿದ್ದರಾಮಯ್ಯ ರಮೇಶ ಜಾರಕಿಹೊಳಿಯವರ ಅಸಮಾಧಾನ ಸರಿ ಪಡಸುತ್ತಾರಾ? ಅನ್ನೋದು ಕಾದು ನೋಡಬೇಕು.

ಸದ್ಯ  ಸಚಿವ ರಮೇಶ ಜಾರಕಿಹೊಳಿ ಬೆಂಗಳೂರಿಗೆ ತೆರಳಿದ್ದು ತೀವ್ರ ಕುತುಹಲ ಕೆರಳಿಸಿದ್ರೆ ಇತ್ತ ಶಾಸಕ ಸತೀಶ್ ಜಾರಕಿಹೊಳಿ ಕೂಡ ಬೆಂಗಳೂರಿಗೆ ತೆರಳುವ ಸಾಧ್ಯತೆ ಹೆಚ್ಚಿದೆ. ಈ ಇಬ್ಬರೂ ಸಹೋದರರ  ಬೆಂಗಳೂರು ಪ್ರಯಾಣದತ್ತ ಎಲ್ಲರ ಚಿತ್ತ  ಇವರ ಮೇಲೆ ಇದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ