ಗೆಳತಿಯ ಅಣ್ಣನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಸೋಮವಾರ, 11 ಏಪ್ರಿಲ್ 2022 (10:20 IST)
ಬೆಂಗಳೂರು: ಸ್ನೇಹಿತೆಯ ಮನೆಗೆ ಹೋಗಿದ್ದಾಗ ಆಕೆಯ ಅಣ್ಣನೇ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಳಿಕ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ತಾನು ಅತ್ಯಾಚಾರವೆಸಗಿದ ವಿಡಿಯೋವನ್ನು 20 ವರ್ಷದ ಯುವಕ ವಿಡಿಯೋ ಮಾಡಿಕೊಂಡಿದ್ದ. ಬಳಿಕ ಇದನ್ನು ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದ. ಇದಾದ ಬಳಿಕ ಅವರೂ ವಿಡಿಯೋ ತೋರಿಸಿ ಬೆದರಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ತನ್ನ ಮಗಳು ಮಂಕಾಗಿರುವುದನ್ನು ಗಮನಿಸಿದ ತಾಯಿ ಪ್ರಶ್ನಿಸಿದಾಗ ನಿಜ ವಿಚಾರ ಗೊತ್ತಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇದೀಗ ಎಲ್ಲಾ ಆರೋಪಿಗಳನ್ನೂ ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ