ವಿಧಾನಪರಿಷತ್ ಉಪಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ

ಶನಿವಾರ, 24 ಡಿಸೆಂಬರ್ 2022 (11:32 IST)
ಬೆಳಗಾವಿ : ಜವಾಬ್ದಾರಿಯುತ ವ್ಯಕ್ತಿ, ಸಜ್ಜನ, ಪ್ರಗತಿಪರ ಚಿಂತನೆ ಇರುವ ರಾಜಕಾರಣಿಯಾದ ಎಂ.ಕೆ. ಪ್ರಾಣೇಶ್ ಅವರಿಂದ ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬೆಲೆ ಸಿಗಲಿದೆ.

ಆ ಮೂಲಕ ಕರ್ನಾಟಕದ ಜನರ ಸಮಸ್ಯೆಗಳಿಗೆ ಉತ್ತರ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.

ಕರ್ನಾಟಕ ವಿಧಾನ ಪರಿಷತ್ತಿನ ಉಪ ಸಭಾಪತಿಗಳಾಗಿ ಆಯ್ಕೆಯಾಗಿರುವ ಎಂ.ಕೆ. ಪ್ರಾಣೇಶ್ ಅವರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಪ್ರಾಣೇಶ್ ಅವರು ಸರ್ವ ಸದಸ್ಯರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸುತ್ತಾರೆ.

ಎಂ.ಕೆ.ಪ್ರಾಣೇಶ್ ಅವರು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿ ಪರಿಹಾರವನ್ನು ಪಡೆಯುವ ಸಜ್ಜನ ರಾಜಕಾರಣಿ. ಅವರ ನಡೆ, ನುಡಿ ಎರಡೂ ಒಂದು. ಬಹಳ ಸೌಮ್ಯ ಸ್ವಾಭಾವದವರು. ಅವರ ಮಾತುಗಳು ಕೂಡ ಬಹಳ ಸೌಮ್ಯ. ಎಲ್ಲಾ ಪಕ್ಷ, ಪಂಗಡಗಳನ್ನು ಮೀರಿ ಅವರು ಸ್ನೇಹ ಬೆಳೆಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ