ಬಳ್ಳಾರಿಯಲ್ಲಿ BJP ಶಾಸಕನ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾಸಕ M.S. ಸೋಮಲಿಂಗಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.. ಶಾಸಕರು ಕಾರ್ಯಕರ್ತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಅವರು ಹಿಟ್ಲರ್ ಆಡಳಿತ ಮಾದರಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ, ಅವರು ಕೇವಲ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ.. ಅವರು ಒಂದು ಕ್ಷೇತ್ರದ ಶಾಸಕರಾ ಅಥವಾ ಒಂದು ಕುಲಕ್ಕೆ ಶಾಸಕರಾ ಎಂದು ಕ್ಷೇತ್ರದ ಜನರು ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಸೋಮಲಿಂಗಪ್ಪ ಮತ್ತು ಅವರ ಮಕ್ಕಳ ನಡೆಯಿಂದಾಗಿ ಕ್ಷೇತ್ರದಾದ್ಯಂತ ಬಿಜೆಪಿಯ ವಿರೋಧಿ ಅಲೆ ಸೃಷ್ಟಿಯಾಗಿದೆ, ಸುಮಾರು 15 ರಿಂದ 20 ವರ್ಷ ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರ ಪರಿಸ್ಥಿತಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ರು.. ಮುಂದಿನ ಚುನಾವಣೆಯಲ್ಲಿ, ಹಾಲಿ ಶಾಸಕ ಸೋಮಲಿಂಗಪ್ಪ ಅವರಿಗೆ ಟಿಕೆಟ್ ನೀಡಬೇಡಿ ಎಂದು ಕಾರ್ಯಕರ್ತರು ಮನವಿ ಮಾಡಿದ್ದಾರೆ.. ಪಕ್ಷಕ್ಕೆ ದುಡಿದಿರುವ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಟಿಕೆಟ್ ನೀಡಬೇಕು ಎಂದು BJP ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು ಮತ್ತು ಕ್ಷೇತ್ರದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.