ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಚಾರ್ಜ್ ಶೀಟ್ ಸಲ್ಲಿಕೆ: ವರದಿಯಲ್ಲಿ ಏನಿದೆ

Krishnaveni K

ಶನಿವಾರ, 28 ಡಿಸೆಂಬರ್ 2024 (10:09 IST)
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ರೆಡ್ಡಿ ವಿರುದ್ಧ ಹನಿಟ್ರ್ಯಾಪ್ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ನಡೆಸಿದ ತನಿಖೆ ಪೂರ್ಣಗೊಂಡಿದ್ದು, ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಚಾರ್ಜ್ ಶೀಟ್ ನಲ್ಲಿ ಮುನಿರತ್ನ ವಿರುದ್ಧ ಅಪರಾಧಕ್ಕೆ ಸಂಚು, ನಿರಂತರ ಅತ್ಯಾಚಾರ, ಉದ್ದೇಶಪೂರ್ವಕ ಅವಮಾನ, ಜೀವ ಬೆದರಿಕೆ, ಅಪಾಯಕಾರಿ ರೋಗ ಹರಡುವಿಕೆ ಸೇರಿದಂತೆ ಹಲವು ಸೆಕ್ಷನ್ ಗಳಲ್ಲಿ ಕೇಸ್ ದಾಖಲಿಸಲಾಗಿದೆ.

ಸೆಪ್ಟೆಂಬರ್ 18 ರಂದು ಮಹಿಳೆಯೊಬ್ಬರು ಒಟ್ಟು ಏಳು ಮಂದಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ ಐಟಿಗೆ ಒಪ್ಪಿಸಿತ್ತು. ಅದರಂತೆ ಇದಿಗ ತನಿಖೆ ಪೂರ್ಣಗೊಳಿಸಿದ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಪ್ರಕರಣ ಸಂಬಂಧ 146 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಈ ಪೈಕಿ ನ್ಯಾಯಾಧೀಶರ ಮುಂದೆ ಸೆಕ್ಷನ್ 164 ರ ಅಡಿಯಲ್ಲಿ 8 ಮಂದಿ ಸಾಕ್ಷಿ ನೀಡಿದ್ದಾರೆ. 850 ದಾಖಲೆಗಳನ್ನೊಳಗೊಂಡ 2481 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.  ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್ ಬಳಸಿ ಏಡ್ಸ್ ಇಂಜೆಕ್ಷನ್ ನೀಡಿ ತಮ್ಮ ಲಾಭಕ್ಕೆ ಬಳಸುತ್ತಿದ್ದರು ಎಂದು ಮುನಿರತ್ನ ಮೇಲೆ ಆರೋಪ ಹೊರಿಸಲಾಗಿದೆ. ಮುನಿರತ್ನ ಜೊತೆಗೆ ಅವರ ಆಪ್ತರ ಮೇಲೂ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ