ಶಾಸಕಿಯಾಗುವ ಹುಚ್ಚು ಹಿಡಿದ್ರೆ ಬಿಡಿಸಲಾಗದು, ಕುಸುಮಾಗೆ ಟಾಂಕ್‌ ಕೊಟ್ರಾ ಮುನಿರತ್ನ

Sampriya

ಶುಕ್ರವಾರ, 29 ಆಗಸ್ಟ್ 2025 (14:56 IST)
ಬೆಂಗಳೂರು: ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಅದನ್ನು ಬಿಡಿಸಬಹುದು, ಆದರೆ ಶಾಸಕಿ ಆಗುವ ಹುಚ್ಚು ಹಿಡದ್ರೆ ಅದನ್ನು ಬಿಡಿಸಲು ಸಾಧ್ಯವಿಲ್ಲ ಎಂದು ಶಾಸಕ ಮುನಿರತ್ನ ಪರೋಕ್ಷವಾಗಿ ಕುಸುಮಾಗೆ ಟಾಂಗ್ ಕೊಟ್ಟರು. 

ರಾಜರಾಜೇಶ್ವರಿ ನಗರದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣು ಶಾಸಕಿ ಆಗಬೇಕೆಂದು ಒಮ್ಮೆ ಹಠ ಹಿಡಿದ್ರೆ ಅದನ್ನು ಸಾಧಿಸುವ ಸಲುವಾಗಿ ಯಾವಾ ಮಟ್ಟಕ್ಕೂ ಹೋಗಲು ಸಿದ್ಧವಿದ್ದಾರೆ. 

ಶಾಸಕಿ ಆಗಬೇಕು ಅಂದ್ರೆ ಮುನಿರತ್ನಗೆ ಹುಚ್ಚು ಹಿಡಿಯಬೇಕು. ಅದಕ್ಕೆ ಮುನಿರತ್ನನಿಗೆ ಹುಚ್ಚು ಹಿಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಯಾರ ಹಣೇಲಿ ಏನು ಬರೆದಿದೆಯೋ ಗೊತ್ತಿಲ್ಲ, ಭೂಮಿಗೆ ಬಂದವರೆಲ್ಲ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದರು. ಅವರಿಂದಲೇ ನಾನು ಹೋಗಬೇಕು ಅಂತಿದ್ರೆ, ಯಾರೂ ತಪ್ಪಿಸೋದಕ್ಕೆ ಆಗಲ್ಲ.

ಯಾವಾಗ ಏನ್ ಬೇಕಾದ್ರೂ ಆಗಬಹುದು, ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ. ಪೊಲೀಸರು ನನ್ನ ರಕ್ಷಣೆಗೆ ನಿಂತಿದ್ದು, ಅವರೆಲ್ಲರಿಗೂ ನಾನು ಋಣಿ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ