ಬೆಂಗಳೂರು: ನಾನು ರಾಜಕೀಯವಾಗಿ ಬೆಳೆಯಲು ಡಿಕೆ ಶಿವಕುಮಾರ್ ಅವರು ಕಾರಣ ರಾಗಿದ್ದಾರೆ. ನಾನು ಮೊದಲಿನಿಂದಲೂ ಹೇಳ್ತಾ ಇದ್ದೀನಿ. ಡಿಕೆಶಿ ಸಾಹೇಬ್ರು ನನಗೆ ಟಿಕೆಟ್ ಕೊಟ್ಟಿದ್ದಾರೆ. ಡಿಕೆಶಿ ಅವರು ಅಗಬೇಕೆಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿಯೂ ನಿನ್ನೆ ಸಭೆಯಲ್ಲಿ ಚರ್ಚೆ ಆಗಿದೆ. ಸಂದರ್ಭ ಬಂದರೆ ದೆಹಲಿಗೆ ಹೋಗ್ತೀವಿ ಎಂದು ತಿಳಿಸಿದ್ದಾರೆ.
ಇನ್ನೂ ಹುಟ್ಟುಹಬ್ಬ ಹಿನ್ನೆಲೆ ಎಲ್ಲಾ ಶಾಸಕರು ಸೇರಿದ್ದೇವೆ. ಸಹಜವಾಗಿ ರಾಜಕೀಯ ಬಗ್ಗೆ ಚರ್ಚೆ ಆಗಿದೆ. ಬಜೆಟ್, ರಾಜಕೀಯ ವರ್ತಮಾನ ಎಲ್ಲವೂ ಚರ್ಚೆ ಆಗಿದೆ. ಸರ್ ಸಿಎಂ ಆಗಬೇಕು ಅನ್ನೋದು ಇದೆ. ಅಲ್ಲಿ ರಾಜಕೀಯ ಡಿಸ್ಕಷನ್ ಆಗಿರೋದು ಸತ್ಯ ಎಂದು ಪ್ರತಿಕ್ರಿಯೆ ನೀಡಿದರು.
ಹೈಕಮಾಂಡ್ ಬಗ್ಗೆ ಏನೂ ಹೇಳೋದಿಲ್ಲ. ನಾವು ಶಾಸಕರು, ನಮ್ಮದು 140 ನಂಬರ್ ಇದೆ. ಗೊಂದಲ ಇತ್ಯರ್ಥ ಆಗಲಿ ಅನ್ನೋದು ನಮ್ಮ ಆಶಯ. ಶಾಸಕರಿಂದಷ್ಟೇ ಸಿಎಂ ಆಯ್ಕೆ ಅಂತೇನೂ ಅಲ್ಲ. ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.