ಬಿಜೆಪಿ ನಾಯಕರ ಫೋನ್ ಗಳಿಂದ ಶಾಸಕರ ಖರೀದಿ?

ಮಂಗಳವಾರ, 9 ಜುಲೈ 2019 (16:23 IST)
ಕಾಂಗ್ರೆಸ್ ಶಾಸಕರು ತಮ್ಮ ಶಾಸಕತ್ವದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಕೈ ಪಾಳೆಯದ ಮುಖಂಡರನ್ನು ಗರಂ ಆಗಿಸಿದೆ.

ಏತನ್ಮಧ್ಯೆ ಬಿಜೆಪಿಯವರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದಾರೆ ಎಂದು ಸಚಿವರೊಬ್ಬರು ಆರೋಪ ಮಾಡಿದ್ದಾರೆ.

ಕೈ ಪಡೆಗೆ ಕೈ ಕೊಟ್ಟು ಮುಂಬೈಗೆ ತೆರಳಿರುವ ಶಾಸಕರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ.

ಸಭೆ ಬಳಿಕ ಮಾತನಾಡಿರುವ ಸಚಿವ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರು ರಾಜೀನಾಮೆ ನೀಡಿರೋ ಶಾಸಕರ ವಿರುದ್ಧ ಕ್ರಮ ಕೈಗೊಳ್ತಾರೆ ಎಂದ್ರು.

ಕೆಲವು ಶಾಸಕರು ಕಾಂಗ್ರೆಸ್ ಬಿಡೋದಿಲ್ಲ ಎಂದಿದ್ದಾರೆ. ಆದರೆ ಈ ನಡುವೆ ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ. ಅವರು ಆಪರೇಷನ್ ಕಮಲ ಮಾಡ್ತಿಲ್ಲ ಎಂದು ಹೇಳ್ತಿದ್ದಾರೆ. ಆದರೆ ಅವರ ಫೋನ್ ಗಳಿಂದ ಶಾಸಕರ ಖರೀದಿ ನಡೆಯುತ್ತಿದೆ ಎಂದು ದೂರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ