ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇಂದಿನಿಂದ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ ಪ್ರಯಾಣಿಕರಿಗೆ ಲಭ್ಯವಾಗಲಿದೆ ,ಬೆಂಗಳೂರು ಮೆಟ್ರೋ ರೈಲು ನಿಗಮ ಆರ್ಬಿಎಲ್ ರತ್ನಾಕರ ಬ್ಯಾಂಕ್ ಸಹಯೋಗದಲ್ಲಿ ರುಪೇ ಎನ್ಸಿಎಂಸಿ ಕಾರ್ಡ್ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಡೆಬಿಟ್, ಕ್ರೆಡಿಟ್ ಕಾರ್ಡ್ನಂತೆ ಇದನ್ನು ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋ ಪ್ರಯಾಣ ಮಾಡಬಹುದಾಗಿದೆ.
ಇನ್ನು ಒಂದು ರಾಷ್ಟ್ರ ಒಂದು ಕಾರ್ಡ್ ಘೋಷಣೆಯಡಿ ಇದನ್ನು ಪ್ರಯಾಣಿಕರಿಗೆ ವಿತರಿಸಲಾಗುತ್ತಿದ್ದು. ನಗರದ 6 ಲಕ್ಷಕ್ಕೂ ಹೆಚ್ಚಿನ ಮೆಟ್ರೋ ಬಳಕೆದಾರರಿಗೆ ಎನ್ಸಿಎಂಸಿ ಕಾರ್ಡ್ ಬಳಕೆಗೆ ಲಭ್ಯವಾಗಲಿದೆ. ಎಲ್ಲ ಮೆಟ್ರೋ ನಿಲ್ದಾಣದಲ್ಲಿ ಹಾಗೂ ಆರ್ಬಿಎಲ್ ಬ್ಯಾಂಕ್ ಶಾಖೆಗಳಲ್ಲಿ ಎನ್ಸಿಎಂಸಿ ಕಾರ್ಡನ್ನು ಪಡೆದುಕೊಳ್ಳಬಹುದಾಗಿದ್ದು , ಈ ಕಾರ್ಡ್ ಶಾಪಿಂಗ್ , ಟೋಲ್ ಪೇ ಸೇರಿದಂತೆ ಇನ್ನಿತರೆ ಹಣಕಾಸು ವಹಿವಾಟಿಗೂ ಕೂಡ ಉಪಯೋಗಿಸಬಹುದಾಗಿದೆ.