ಶಾಸಕರನ್ನು ಐದು ದಿನ ಲೋಕಾಯುಕ್ತ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಮಂಗಳವಾರ, 28 ಮಾರ್ಚ್ 2023 (19:17 IST)
ಬಂಧನದ ಬೆನ್ನಲ್ಲೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.  ಪುತ್ರನ ಚಾಟ್, ಸೊಸೆಯ ಹೇಳಿಕೆಯೇ ದೊಡ್ಡ ಕಂಟಕ ತಂದಿಟ್ಟಿದ್ದು, ಬೇಲ್ ಕ್ಯಾನ್ಸಲ್ ಗೆ ಲೋಕಾ ಪೊಲೀಸರ ಪ್ಲಾನ್ ವರ್ಕೌಟ್ ಆಗಿದೆ. ಈ ನಡುವೆ ಪೊಲೀಸ್ ಕಸ್ಟಡಿಗೆ ಪಡೆದ ಲೋಕಾಯುಕ್ತ ಪೊಲೀಸ್ರು ವಿಚಾರಣೆ ಆರಂಭಿಸಿದ್ದಾರೆ.ಟೆಂಡರ್ ಡೀಲ್ ಸಂಬಂಧ ಶಾಸಕ ಮಾಡಾಳು ವಿರೂಪಾಕ್ಷಪ್ಪನನ್ನ ಐದು ದಿನ ಲೋಕಾಯುಕ್ತ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.  ನಿನ್ನೆ ನೀರಿಕ್ಷಣಾ ಜಾಮೀನು ರದ್ದಾಗ್ತಿದ್ದಂತೆ ಮಾಡಾಳು ವಿರೂಪಾಕ್ಷಪ್ಪನನ್ನು ಬಂಧಿಸಿದ್ದ ಪೊಲೀಸರು ತಡರಾತ್ರಿವರೆಗೂ ಮಾಡಾಳ್ ನನ್ನ ವಿಚಾರಣೆ ನಡೆಸಿದ್ದರು. ಈ ವೇಳೆ  ಪುತ್ರ ಪ್ರಶಾಂತ್ ಜೊತೆ ದೂರುದಾರ ನಡೆಸಿದ್ದ ಚಾಟ್ ನ ಸಂಭಾಷಣೆ ಲೋಕಾ ಪೊಲೀಸರಿಗೆ ದೊರೆತಿದೆ.  ದೂರುದಾರನೊಂದಿಗೆ 48 ಬಾರಿ ಮೆಸೇಜ್ ಮಾಡಿದ್ದ ಪ್ರಶಾಂತ್ ಮಾಡಾಳ್, ಕಶ್ಯಪ್ ಜೊತೆ ಡೀಲ್ ಬಗ್ಗೆ ಮಾತನಾಡಿದ್ದರು. ಚಾಟ್ ನಲ್ಲಿ ಜಾಣ್ಮೆಯ ಉತ್ತರ ನೀಡಿದ್ದ ಪ್ರಶಾಂತ್ ಎಲ್ಲೂ ಕೂಡ ಹಣ ಮೆನ್ಷನ್ ಮಾಡಿಲ್ಲ.
ಇದು ಸದ್ಯ ಮಾಡಾಳ್‌ಗೆ ದೊಡ್ಡ ಸಂಕಷ್ಟ ತಂದೊಡ್ಡಿ ಅರೆಸ್ಟ್ ಆಗುವಂತಾಗಿದೆ. 

ಇನ್ನು ಕೆಎಸ್‌ಡಿಲ್‌ನ ಎಂಡಿ, ಐಎಎಸ್ ಅಧಿಕಾರಿ ಮಹೇಶ್ ಕೂಡ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 168 ಅಡಿಯಲ್ಲಿ ಸ್ಟೇಟ್ಮೆಂಟ್ ನೀಡಿದ್ದು, ಡೀಲ್ ಬಗ್ಗೆ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ಯಾವಾಗ ಟೆಂಡರ್ ಪ್ರಾರಂಭ ಆಯ್ತು..? ಟೆಂಡರ್‌ನ ಒಟ್ಟು ಮೊತ್ತ ಎಷ್ಟು..? ಯಾರಿಗೆ ಟೆಂಡರ್ ಹೋಗ್ಬೇಕಿತ್ತು...? ಯಾವ ಆಧಾರದ ಮೇಲೆ ಬೇರೆಯವರಿಗೆ ಟೆಂಡರ್ ಹೋಗಿದೆ ಎಂಬ ಬಗ್ಗೆ ಹೇಳಿಕೆ ನೀಡಿದ್ದಾರೆ.ಇದು ಮಾಡಾಳ್ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಲು ಪ್ರಮುಖ ಕಾರಣವಾಗಿದೆ. ಸಂಜಯನಗರದ ಮನೆಯಲ್ಲಿ ಹಣ ಸಿಕ್ಕ ಬಳಿಕ ಪೊಲೀಸ್ರು ಮಹಜರು ವೇಳೆ ಮಾಡಾಳ್ ಸೊಸೆಯ ಹೇಳಿಕೆ ದಾಖಲಿಸಿದ್ದಾರೆ. ಮನೆಯಲ್ಲಿ 6.10 ಕೋಟಿ ಸಿಕ್ಕಿದ್ದು, ಇದು ಮಾವನವರ ರೂಂ. ನಾವ್ಯಾರೂ ಆ ಕೋಣೆಗೆ ಹೋಗ್ತಿರಲಿಲ್ಲ. ಬಳಸುತ್ತಿಲಿಲ್ಲ ಎಂದು  ಸೊಸೆ ನೀಡಿದ್ದ ಹೇಳಿಕೆ ಸಹ ಮಾಡಾಳ್ ಜಾಮೀನು ರದ್ದಿಗೆ ಪೂರಕವಾಗಿದೆ ಎನ್ನಲಾಗ್ತಿದೆ. ಈ ಎಲ್ಲಾ ದಾಖಲೆಗಳ ಸಮೇತ ಇಂದು ಮಾಡಾಳು ವಿರೂಪಾಕ್ಷಪ್ಪನನ್ನು ಕೋರ್ಟ್ ಗೆ ಹಾಜರುಪಡಿಸಿದ್ರು.
 
ಮಧ್ಯಾಹ್ನ ಮೂರುವರೆ ಸುಮಾರಿಗೆ ಲೋಕಾ ಕಚೇರಿಯಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮಾಡಾಳ್ ರನ್ನ ಕರೆತಂದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ರು.ಈ ವೇಳೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಅಂತಾ ಮನವಿ ಮಾಡಿಕೊಂಡ್ರು. ಅದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಮಾಡಾಳು ಪರ ವಕೀಲರು ಈಗಾಗಲೆ ಐದು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಮಾಡಾಳ್ ರ ಆರೋಗ್ಯ ಸರಿಯಿಲ್ಲ ಅಂದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕಾ ಪರ ವಕೀಲರು, ತನಿಖೆಗೆ ಸ್ಪಂದಿಸಿಲ್ಲ ಅಂತಾ ಕೋರ್ಟ್ ಗಮನಕ್ಕೆ ತಂದ್ರು. ಮಾಡಳ್ ರನ್ನ ಐದು ದಿನಗಳ ಕಾಲ ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಯಂತ್ ಕುಮಾರ್ ಆದೇಶ ನೀಡಿದ್ರು.ಸದ್ಯ ಸಂಜೆ ವೇಳೆಗೆ ಮಾಡಾಳ್ ರನ್ನ ಬೌರಿಂಗ್ ಗೆ ಕರೆದೊಯ್ದು ಮೆಡಿಕಲ್ ಟೆಸ್ಟ್ ಮಾಡಿಸಿದ ಲೋಕಾ ಪೊಲೀಸ್ರು ವಿಚಾರಣೆ ಮುಂದುವರೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ