ಆಸಿಯಾನ್ ಸಭೆಯಲ್ಲಿ 12 ಅಂಶಗಳನ್ನು ಪ್ರಸ್ಥಾಪಿಸಿದ ಮೋದಿ
ಏಷ್ಯಾದ ಶತಮಾನಕ್ಕೆ ಕೋವಿಡ್-19 ನಂತರದ ನಿಯಮಗಳ ರಚನೆಯ ಅಗತ್ಯವಿದೆ ಮತ್ತು ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು ಜಂಟಿ ಪ್ರಯತ್ನಗಳ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಆಸಿಯಾನ್ 10 ಸದಸ್ಯರೊಂದಿಗೆ ಸಹಕಾರವನ್ನು ಹೆಚ್ಚಿಸಲು ಮೋದಿ 12 ಅಂಶಗಳ ಯೋಜನೆಯನ್ನು ಪ್ರಸ್ತಾಪಿಸಿದರು.ಇನ್ನು ಬೀಜಿಂಗ್ ಚೀನಾದ ಗಡಿಯೊಳಗಿನ ಇತರ ದೇಶಗಳ ಪ್ರದೇಶಗಳನ್ನು ಒಳಗೊಂಡಿರುವ “ಪ್ರಮಾಣಿತ ನಕ್ಷೆ”ಯನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಬಂದಿದೆ. ಅಂದಹಾಗೆ ಭಾರತ, ಜಪಾನ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಮತ್ತು ತೈವಾನ್ ಧೇಶಗಳು ಚೀನಾದ ನಕ್ಷೆಯನ್ನು ವಿರೋಧಿಸಿವೆ.