500 ರೂ ಮತ್ತು 1000 ರೂ. ನೋಟುಗಳಿಗೆ ನಿಷೇಧ ಹೇರಿದ್ದ ಕೇಂದ್ರ ಸರಕಾರ ಇಂದು ಮಧ್ಯರಾತ್ರಿಯವರಿಗೆ ಹಣ ಚಲಾವಣೆಯ ಗಡುವು ನೀಡಿತ್ತು. ಆದರೆ, ಇದೀಗ ಇನ್ನು 3 ದಿನ ಹಳೆಯ ನೋಟುಗಳ ಸ್ವೀಕಾರ ಅವಧಿಯನ್ನು ಹೆಚ್ಚಳಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರದ ನಿರ್ಧಾರದಿಂದ ಆಸ್ಪತ್ರೆ, ರೈಲ್ವೇ, ವಿಮಾನ ನಿಲ್ದಾಣ, ಬಸ್ ಪ್ರಯಾಣ, ಮೆಡಿಕಲ್ ಶಾಪ್, ಬಿಲ್ ಪಾವತಿ ಮಾಡುವ ಸ್ಥಳ, ಪೆಟ್ರೋಲ್ ಬಂಕ್‍ಗಳಲ್ಲಿ ಹಳೆಯ ನೋಟುಗಳನ್ನು ಜನರು ನೀಡಬಹುದು.
ಹಳೆಯ 500, 1 ಸಾವಿರ ರೂ. ನೋಟ್ ನಿಷೇಧವಾದ ಬಳಿಕ ಕೇಂದ್ರ ಸರ್ಕಾರ ನ. 11ರ ವರೆಗೆ ಈ ಮೇಲಿನ ಸ್ಥಳಗಳಲ್ಲಿ ಚಲಾವಣೆ ಮಾಡಲು ಅನುಮತಿ ನೀಡಿತ್ತು. ಆದರೆ ಎಟಿಎಂ ಮತ್ತು ಬ್ಯಾಂಕ್ ಗಳಲ್ಲಿ ಹಣಗಳು ಸಕಾಲದಲ್ಲಿ ವಿತರಣೆಯಾಗದೇ ಇರುವ ಕಾರಣ ಕೇಂದ್ರ ಸರ್ಕಾರ ಈ ಗಡುವನ್ನು ಇನ್ನು ಮೂರು ದಿನಗಳ ಕಾಲ ವಿಸ್ತರಿಸಿದೆ.