ನಿಮ್ಮ ಮನೆಯಲ್ಲಿರೋ ಬಂಗಾರದ ಮೇಲೆ ಮೋದಿ ಸರಕಾರದ ಕಣ್ಣು

ಬುಧವಾರ, 30 ಅಕ್ಟೋಬರ್ 2019 (18:43 IST)

ಕೇಂದ್ರ ಸರಕಾರ ಬಂಗಾರದ ಮೇಲೆ ತೆರಿಗೆಯನ್ನು ಹೆಚ್ಚಿಸಲು ಚಿಂತನೆ ನಡೆಸಿರೋದು ಭಾರೀ ವಿವಾದಕ್ಕೆ ಕಾರಣವಾಗುವ ಲಕ್ಷಣಗಳು ಗೋಚರಿಸಿವೆ.


ನೋಟು ನಿಷೇಧ ಮಾಡಿ ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮುಂದಾಗಿತ್ತು. ಇದೀಗ ನಿಮ್ಮ ಮನೆಗಳಲ್ಲಿ ದಾಖಲೆ ಇಲ್ಲದ ಚಿನ್ನವನ್ನು ಸರಕಾರ ನಿಗದಿಪಡಿಸೋ ಟ್ಯಾಕ್ಸ್ ಕಟ್ಟಿ ಸಕ್ರಮ ಮಾಡಿಕೊಳ್ಳಬೇಕು.

ಇನ್ ಕಂ ಟ್ಯಾಕ್ಸ್ ಅಮ್ನೆಸ್ಟಿ ಸ್ಕೀಂ ನಂತೆಯೇ ಇಲ್ಲಿ ಬಂಗಾರದ ಅಮ್ನೆಸ್ಟಿ ಸ್ಕೀಂ ತರೋಕೆ ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.

ನಿಮ್ಮ ಮನೆಯಲ್ಲಿ ದಾಖಲೆ ಇಲ್ಲದ ಚಿನ್ನ ಇದ್ದರೆ ಅದಕ್ಕೆ ಟ್ಯಾಕ್ಸ್ ಕಟ್ಟಿ ಸಕ್ರಮ ಮಾಡಿಕೊಳ್ಳಬೇಕು ಅನ್ನೋ ನಿಯಮ ರೂಪಿಸಲಾಗುತ್ತಿದೆಯಂತೆ.

ಎಷ್ಟು ಪ್ರಮಾಣದ ಚಿನ್ನಕ್ಕೆ ಎಷ್ಟು ಹೆಚ್ಚಿನ ತೆರಿಗೆ? ತಲಾ ಆದಾಯ ಹೊಂದಿರೋರು ಎಷ್ಟು ಎಷ್ಟು ಚಿನ್ನ ಹೊಂದಿರಬೇಕು? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಗೊತ್ತಾಗಬೇಕಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ