ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಕ್ ಗಡಿಪ್ರದೇಶದಲ್ಲಿ ಭೇಟಿ ನೀಡಿದ್ದಾರೆ.
ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿರುವ ದೇಶದ ಸೈನಿಕರನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಯೋಧರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಮ್ಮ ಸೈನಿಕರ ಸ್ಥೈರ್ಯ ಜಗತ್ತಿಗೆ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ ಎಂದು ಮೋದಿ ಹೇಳಿದ್ದಾರೆ.
ಧೈರ್ಯವು ಶಾಂತಿಗೆ ಪೂರಕವಾದ ಹಾಗೂ ಪೂರ್ವವಾದ ಅವಶ್ಯವಾಗಿದೆ. ದುರ್ಬಲರು ಶಾಂತಿಯನ್ನು ಪ್ರಾರಂಭಿಸಲು ಎಂದಿಗೂ ಸಾಧ್ಯವಿಲ್ಲ ಹೀಗಂತ ಮೋದಿ ಹೇಳಿದ್ದಾರೆ.
ಲಡಾಕ್ ಗೆ ಭೇಟಿ ನೀಡಿರುವ ಮೋದಿ ಅಚ್ಚರಿ ಮೂಡಿಸಿದ್ದು, ಶತ್ರುಗಳಿಗೆ ನಮ್ಮ ಯೋಧರ ಬೆಂಕಿ ಮತ್ತು ಕೋಪದ ರುಚಿ ಚೆನ್ನಾಗಿ ಗೊತ್ತಾಗಿದೆ ಎಂದು ಹೇಳುವ ಮೂಲಕ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.