ಎನ್‌ಡಿಎಗೆ ಜೆಡಿಎಸ್‌ ಕೊಡುವ ಶಕ್ತಿಯನ್ನು ಮೋದಿ ಗುರತಿಸ್ತಾರೆ: ದೇವೇಗೌಡ

Sampriya

ಶುಕ್ರವಾರ, 27 ಫೆಬ್ರವರಿ 2026 (20:15 IST)
ಬೆಂಗಳೂರು: ನಾವು ಜೆಡಿಎಸ್‌ ಎನ್‌ಡಿಎಗೆ ಕೊಡುವ ಶಕ್ತಿಯನ್ನು ಗುರುತಿಸಿ, ಬಳಸಿಕೊಳ್ಳುವ ಜಾಣ್ಮೆ, ಪ್ರಬುದ್ಧತೆ ಮೋದಿ, ಶಾ ಅವರಿಗಿದೆ. ಎನ್‌ಡಿಎ ಮತ್ತಷ್ಟು ಗಟ್ಟಿಗೊಳಿಸುವ ವಿಶ್ವಾಸವೂ ಇದೆ ಎಂದು ಜೆಡಿಎಸ್ ಹಿರಿಯ ನಾಯಕ ದೇವೇಗೌಡ ಹೇಳಿದರು. 

ಜೆಡಿಎಸ್‌ ಬೆಳ್ಳಿಹಬ್ಬದ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜನತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

93 ವರ್ಷ ವಯಸ್ಸಾಗಿರುವ ನನಗೆ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಇಚ್ಛೆ ಇಲ್ಲ. ಈ ಶರೀರದಿಂದ ಆತ್ಮ ಹೊರ ಹೋಗುವ ಮುನ್ನಾ ರಾಜ್ಯದಲ್ಲಿ ಯೋಗ್ಯ ಆಡಳಿತ ಕೊಡುವ ಸರ್ಕಾರ ಬರಲಿದೆ. ಅದನ್ನು ಮೋದಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಮೈಸೂರು, ಕಿತ್ತೂರು, ಕಲ್ಯಾಣ ಕರ್ನಾಟಕ ಎಂದು ರಾಜ್ಯವನ್ನು ಮೂರು ಭಾಗವಾಗಿ ವಿಂಗಡಿಸುವ ಅಗತ್ಯ ಇಲ್ಲ, ನಾವೆಲ್ಲ ಒಂದೇ ತಾಯಿ ಮಕ್ಕಳು.ಒಟ್ಟಾಗಿ ಇರೋಣ, ಸಮೃದ್ಧ ಕರ್ನಾಟಕ ಕಟ್ಟೋಣ ಎಂದು ಕರೆಕೊಟ್ಟರು. 

ನನ್ನ ರಾಜಕೀಯ ಬದುಕಿನಲ್ಲಿ ಇಂತಹ ಕೆಟ್ಟ ಆಡಳಿತ ನೀಡಿದ ರಾಜ್ಯ ಸರ್ಕಾರವನ್ನು ನೋಡಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಂಗ್ಯದ ನಗೆ ಬೀರಿದ ದೇವೇಗೌಡರು, ‘ದುಡಿಯುವ ಕೈಗೆ ಉದ್ಯೋಗ ನೀಡುವ ಕಾರ್ಯ ಮಾಡಬೇಕು’ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ