ರಾಜ್ಯಕ್ಕೆ ಮೋದಿ ಆಗಮನ : ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

ಸೋಮವಾರ, 6 ಫೆಬ್ರವರಿ 2023 (11:02 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಂಗಳೂರು ಸೇರಿದಂತೆ ನಗರದ ಹೊರವಲಯದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
 
ಕಾರ್ಯಕ್ರಮದ ವಿವರ

ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ, ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಚಾಲನೆ ನೀಡಲಿದ್ದಾರೆ.

ಸೋಮವಾರ ಬೆಳಗ್ಗೆ 11ಕ್ಕೆ ಹೆಲಿಪ್ಯಾಡ್ ಮೂಲಕ ಮಾದವಾರ ಲ್ಯಾಂಡ್ ಆಗಲಿದ್ದು ನಂತರ 2:30 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಜನ, 650ಕ್ಕೂ ಹೆಚ್ಚು ಪ್ರಾಯೋಜಕರು, 8,000 ಹೊರ ದೇಶದ ಪ್ರತಿನಿಧಿಗಳು,

500ಕ್ಕೂ ಹೆಚ್ಚು ಭಾಷಣಕಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾಲ್ ಎರಡರ ಉದ್ಘಾಟನೆಯನ್ನು ಮೋದಿಯವರು ಮಾಡಲಿದ್ದಾರೆ. ನಂತರ ದೇಶ ಸೇರಿದಂತೆ ವಿದೇಶಿ ಗಣ್ಯರ ಜೊತೆಗೆ ಸಮಾಲೋಚನೆ ಮಾಡಲಿದ್ದಾರೆ. 

ಬೆಂಗಳೂರಿನ ಕಾರ್ಯಕ್ರಮ ಮುಗಿಸಿಕೊಂಡು ತುಮಕೂರಿನಲ್ಲಿ ನಡೆಯಲಿರುವ  ಹೆಲಿಕಾಪ್ಟರ್ ತಯಾರಿಕಾ ಘಟಕ ಹಾಗೂ ಕೈಗಾರಿಕಾ ಟೌನ್ಶಿಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ