ಕೊನೆಗೂ ಗೆದ್ದ ಡಿಕೆಶಿ ಹಠ: ನಲಪಾಡ್ ಅಧ್ಯಕ್ಷ

ಮಂಗಳವಾರ, 6 ಜುಲೈ 2021 (09:31 IST)
ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ನೆಚ್ಚಿನ ಮೊಹಮ್ಮದ್ ನಲಪಾಡ್ ರನ್ನು ಅಧ್ಯಕ್ಷ ಗಾದಿಗೇರಿಸುವಲ್ಲಿ ಕೊನೆಗೂ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.


ಮುಂದಿನ ಜನವರಿಗೆ ನಲಪಾಡ್ ಅಧ್ಯಕ್ಷರಾಗಲಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ‍್ಯಕ್ಷ ಬಿ.ವಿ. ಶ್ರೀನಿವಾಸ್ ಪ್ರಕಟಣೆ ನೀಡಿದ್ದಾರೆ. ಜನವರಿವರೆಗೆ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ವಾರದ ಹಿಂದೆ ರಕ್ಷಾ ರಾಮಯ್ಯರನ್ನು ಅಧ್ಯಕ್ಷರಾಗಿ ನೇಮಕ ಮಾಡುವಾಗಲೇ ಈ ಬಗ್ಗೆ ಒಪ್ಪಂದವಾಗಿತ್ತು. ತಮ್ಮ ಪಟ್ಟು ಬಿಡದ ಡಿಕೆಶಿ ಕೊನೆಗೂ ತಮ್ಮ ಪರ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ