ರಾಷ್ಟ್ರೀಕೃತ ಬ್ಯಾಂಕ್ ಖಾತೆದಾರರಿಗೆ ಹಾಗೂ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಇನ್ಮುಂದೆ ಮನೆ ಬಾಗಿಲಿಗೆ ಹಣ ಬರುತ್ತದೆ. ಲಾಕ್ ಡೌನ್ ಇದ್ದರೂ ಚಿಂತೆಯಿಲ್ಲ.
ಹಾವೇರಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ವಿಶೇಷವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅವಶ್ಯಕ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆ ಸನ್ನದ್ಧವಾಗಿದ್ದು, ಗ್ರಾಮೀಣ ಜನತೆ ಹತ್ತಿರದ ಅಂಚೆ ಇಲಾಖೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಗ್ರಾಮೀಣ ಜನತೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಇತರೆ ಬ್ಯಾಂಕಿನ ವ್ಯವಹಾರಗಳು ಅಂದರೆ ಹಣ ಹಿಂಪಡೆಯುವದು, ಬ್ಯಾಲೆನ್ಸ್ ವಿಚಾರಣೆ, ಖಾತೆಯ ವ್ಯವಹಾರದ ವಿಚಾರಣೆಯನ್ನು ಹತ್ತಿರದ ಅಂಚೆ ಕಚೇರಿ ವಿಶೇಷವಾಗಿ ಗ್ರಾಮೀಣ ಅಂಚೆ ಕಚೇರಿಗಳ ಪೋಸ್ಟ್ ಮಾಸ್ಟರ್/ ಗ್ರಾಮೀಣ ಅಂಚೆ ಸೇವಕರಿಗೆ ತಿಳಿಸಬೇಕು.
ಅವರು ತಮ್ಮ ಮನೆಗೆ ಬಂದು ಹಣವನ್ನು ಪೂರೈಸುವರು. ಈ ಸಂದರ್ಭದಲ್ಲಿ ಆಧಾರ್ ನಂಬರ್, ಖಾತೆ ನಿರ್ವಹಿಸುವ ಬ್ಯಾಂಕಿನ ನಂಬರ್, ಮೊಬೈಲ್ ನಂಬರ ಮತ್ತು ಖಾತೆದಾರರ ಬೆರಳಚ್ಚು ನೀಡಬೇಕಾಗುತ್ತದೆ. ಎಲ್ಲ ದಾಖಲೆಗಳ ಪರಿಶೀಲನೆ ಖಚಿತತೆ ಆಧಾರ ಪ್ರಮಾಣಿಕರಿಸಿ ನಂತರ ಸೂಚಿಸಿದ ನಗರದನ್ನು(ಗರಿಷ್ಠ 10,000/-ರವರೆಗೆ) ರಾಷ್ಟ್ರೀಕೃತ ಬ್ಯಾಂಕಿನಿಂದ ಹಿಂಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.