ಹಾಡಹಗಲೇ ಮಣಿಪಾಲದ ಮೋರ್ ಸೂಪರ್ ಮಾರ್ಕೆಟ್ ಲೂಟಿ

ಸೋಮವಾರ, 13 ಮಾರ್ಚ್ 2017 (15:31 IST)

ಹಾಡಹಗಲೇ ಮುಸುಕುಧಾರಿಗಳು ಮ್ಯಾನೇಜರ್`ಗೆ ಗನ್ ತೋರಿಸಿ 3 ಲಕ್ಷ ರೂಪಾಯಿ ಲೂಟಿ ಮಾಡಿರುವ ಘಟನೆ ಉಡುಪಿಯ ಮಣಿಪಾಲದಲ್ಲಿರುವ ಮೋರ್ ಸೂಪರ್ ಮಾರ್ಕೆಟ್`ನಲ್ಲಿ ನಡೆದಿದೆ.


ಬೈಕ್`ನಲ್ಲಿ ಬಂದ ಬ್ಬರು ಮುಸುಕುಧಾರಿಗಳು ಮೊದಲಿಗೆ ಸಿಬ್ಬಂದಿಗೆ ತಲವಾರ್ ತೋರಿಸಿದ್ದಾರೆ. ಬಳಿಕ ಮ್ಯಾನೇಜರ್ ಮುಂದೆ ಗನ್ ಇಟ್ಟು ಹೆದರಿಸಿದ್ದಾರೆ. ಬೆದರಿದ ಮ್ಯಾನೇಜರ್ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ನೀಡಿದ್ದಾರೆ.

ಕೂಡಲೇ ಮೋರ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ. ಮೋರ್ ಸೂಪರ್ ಮಾರ್ಕೆಟ್`ನಲ್ಲಿ ಸಿಸಿಟಿವಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ, ದುಷ್ಕರ್ಮಿಗಳು ಚಹರೆ ಪತ್ತೆಮಾಡುವುದು ಪೊಲೀಸರಿಗೆ ಸವಾಲಾಗಿದೆ.

ವೆಬ್ದುನಿಯಾವನ್ನು ಓದಿ