ಪರಪುರುಷನ ತೆಕ್ಕೆಗೆ ಜಾರಿದ ತಾಯಿ; ಮಗ ಮಾಡಿದ್ದೇನು?

ಬುಧವಾರ, 6 ಮಾರ್ಚ್ 2019 (18:18 IST)
ತನ್ನ ತಾಯಿಯ ಜತೆಗೆ ಅನ್ಯ ಪುರುಷನೊಬ್ಬ ಅಕ್ರಮ ಸಂಬಂಧ ಹೊಂದಿದ್ದರ ಕುರಿತು ಆಕ್ರೋಶಗೊಂಡ ಮಗ ಮಾಡಬಾರದ ಭಯಾನಕ ಕೆಲಸ ಮಾಡಿದ್ದಾನೆ.

ಮೈಸೂರಿನಲ್ಲಿ ತಾಯಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಆಕೆಯ ಮಗ ತನ್ನ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿದ್ದಾನೆ.

ಬಲ್ಲಹಳ್ಳಿಯ ಕಾಂತರಾಜ್ ( 46) ಕೊಲೆಯಾದವನಾಗಿದ್ದಾನೆ. ಅರಸಿನಕೆರೆ-ಬೆಟ್ಟದಬೀಡು ಮೀಸಲು ಅರಣ್ಯದಲ್ಲಿ ಪತ್ತೆಯಾದ ಶವದ ತನಿಖೆ ಕೈಗೊಂಡಾಗ ಈ ಅಸಲಿಯತ್ತು ಬೆಳಕಿಗೆ ಬಂದಿದೆ. ದಟ್ಟಗಳ್ಳಿ ನಿವಾಸಿ ಆದರ್ಶ್ ಹಾಗೂ ಆತನ ಸ್ನೇಹಿತರಾದ ಮಹದೇವ, ತೇಜು ಹಾಗೂ ಪುಟ್ಟರಾಜು ಕೊಲೆಗೆ ಸಹಕಾರ ನೀಡಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ದಟ್ಟಗಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬಳೊಂದಿಗೆ ಕಾಂತರಾಜ್ ಅಕ್ರಮ ಸಂಬಂಧ ಹೊಂದಿದ್ದನು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ