ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ಸಚಿವ ಸಂಪುಟ ರಚನೆ ಆಗಿದ್ದೇ ತಡ ಬಿಜೆಪಿಯಲ್ಲಿನ ಶಾಸಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೂ ಕೆಲವರು ರಾಜಕೀಯ ನಿವೃತ್ತಿ ಆಗ್ತೇನೆ ಅನ್ನೋ ಮೂಲಕ ವರಿಷ್ಠರಿಗೆ ಟಾಂಗ್ ನೀಡುತ್ತಿದ್ದಾರೆ.
ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಸೋಲು ಕಂಡಿರೋ ಲಕ್ಷ್ಮಣ ಸವದಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರೋದಕ್ಕೆ ಕಮಲ ಪಾಳೆಯದ ಹಲವು ಶಾಸಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿಎಂ ಆಪ್ತ ಎಂದೇ ಗುರುತಿಸಿಕೊಂಡಿರೋ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸವದಿ ವಿರುದ್ಧ ಕೆಂಡ ಕಾರಿದ್ದಾರೆ. ಒಂದು ವೇಳೆ ಏನಾದರೂ ತೊಂದರೆ ಬಂದರೆ ರಾಜಕೀಯ ಬಿಡುವೆ ಅಂತಾನೂ ಹೇಳಿಕೊಂಡಿರೋದು ಹಲವು ಚರ್ಚೆಗೆ ಕಾರಣವಾಗಿದೆ.
ಸ್ವಾಭಿಮಾನ ಅನ್ನೋದು ಮುಖ್ಯ. ಅದಕ್ಕೆ ತೊಂದ್ರೆ ಆದರೆ ರಾಜಕೀಯ ಬಿಡ್ತೀನಿ ಅಂತ ರೇಣುಕಾಚಾರ್ಯ ಪರೋಕ್ಷವಾಗಿ ಸಚಿವ ಸ್ಥಾನ ನೀಡದ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.